Bengaluru CityDistrictsKarnatakaLatestMain Post

ಜಯನಗರದ ಯುನೈಟೆಡ್ ಆಸ್ಪತ್ರೆಯಲ್ಲಿ ರಾಜ್ಯದಲ್ಲೇ ಮೊದಲ ಆಟೋಲೋಗಸ್ ಕಾರ್ಟಿಲೆಜ್ ಕಸಿ ಶಸ್ತ್ರಚಿಕಿತ್ಸೆ

- ಅತ್ಯಾಧುನಿಕ ವಿಧಾನದ ಶಸ್ತ್ರಚಿಕಿತ್ಸೆಯ ಮೂಲಕ ಕ್ಷಿಪ್ರವಾಗಿ ಚೇತರಿಸಿಕೊಂಡ ಕ್ರೀಡಾಪಟು

Advertisements

ಬೆಂಗಳೂರು: ಫುಟ್‌ಬಾಲ್ ಆಟದಲ್ಲಿ ಪಾದದ ಕಾರ್ಟಿಲೆಜ್‌ಗೆ ಹಾನಿಮಾಡಿಕೊಂಡಿದ್ದ ಕ್ರೀಡಾಪಟುವಿಗೆ ರಾಜ್ಯದಲ್ಲೇ ಪ್ರಪ್ರಥಮ ಬಾರಿಗೆ ಅತ್ಯಾಧುನಿಕ ಆಟೋಲೋಗಸ್ ಕಾರ್ಟಿಲೆಜ್ ಕಸಿ ಶಸ್ತ್ರಚಿಕಿತ್ಸೆಯನ್ನು ಜಯನಗರದ ಯುನೈಟೆಡ್ ಆಸ್ಪತ್ರೆಯ ವೈದ್ಯರು ನೆರವೇರಿಸಿದ್ದಾರೆ.

ರಾಜ್ಯದಲ್ಲೆ ಪ್ರಪ್ರಥಮ ಬಾರಿಗೆ ನಡೆಸಿದ ಈ ಅತ್ಯಾಧುನಿಕ ತಂತ್ರಜ್ಞಾನದ ಶಸ್ತ್ರಚಿಕಿತ್ಸೆಯ ಬಗ್ಗೆ ಆಸ್ಪತ್ರೆಯ ವೈದ್ಯರು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

ಇತ್ತೀಚಿಗೆ ಫುಟ್‌ಬಾಲ್ ಆಟಗಾರ ಅಜಯ್ ಪಂದ್ಯವೊಂದರಲ್ಲಿ ತನ್ನ ಪಾದಕ್ಕೆ ಗಾಯ ಮಾಡಿಕೊಂಡಿದ್ದರು. ಕೀಲುಗಳ ಕಾರ್ಟಿಲೆಜ್ ಸಮಸ್ಯೆಯನ್ನು ಸಾಮಾನ್ಯವಾಗಿ ಯಾವುದೇ ಶಸ್ತ್ರಚಿಕಿತ್ಸೆಗಳಿಲ್ಲದೆ ನಿವಾರಿಸಲಾಗುತ್ತದೆ. ದೀರ್ಘಕಾಲದ ವಿಶ್ರಾಂತಿ ತೆಗೆದುಕೊಳ್ಳುವುದು ಸಾಮಾನ್ಯವಾಗಿ ಭಾರತದಲ್ಲಿ ರೂಢಿಯಲ್ಲಿದೆ. ಆದರೆ ಇದು ಕ್ರೀಡಾಪಟುಗಳು ತಮ್ಮ ಚಟುವಟಿಕೆಗಳಲ್ಲಿ ಮುಂದುವರಿಯುವುದನ್ನು ತಡೆಯುತ್ತದೆ ಹಾಗೂ ನಿಧಾನವಾಗಿ ಚೇತರಿಸಿಕೊಳ್ಳುವ ಮೂಲಕ ತಮ್ಮ ಕ್ರೀಡಾ ಸಾಮರ್ಥ್ಯವನ್ನು ಮರಳಿ ಪಡೆದುಕೊಳ್ಳಲು ಬಹಳಷ್ಟು ಸಮಯಾವಕಾಶ ಬೇಡುತ್ತದೆ ಎಂದರು.

ನೂತನ ವಿಧಾನದ ಶಸ್ತ್ರಚಿಕಿತ್ಸೆಯ ಬಗ್ಗೆ ವಿವರಿಸಿದ ಯುನೈಟೆಡ್ ಆಸ್ಪತ್ರೆಯ ಕನ್ಸಲ್ಟೆಂಟ್ ಆರ್ಥೋಪಿಡಿಶಿಯನ್ ಡಾ. ಪ್ರದ್ಯುಮ್ನ ಆರ್, ಅಥ್ಲೆಟಿಕ್‌ನಲ್ಲಿ ಪಾಲ್ಗೊಳ್ಳುವ ಮಂದಿಗೆ ಕೀಲಿನ ಕಾರ್ಟಿಲೆಜ್ ಗಾಯಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಸಾಮಾನ್ಯವಾಗಿ ವೃತ್ತಿಪರ ಕ್ರೀಡಾಪಟುಗಳು ಮತ್ತು ಕ್ರೀಡಾ ಹವ್ಯಾಸಿಗಳು ಕಾರ್ಟಿಲೆಜ್ ಹಾನಿಗೆ ಗುರಿಯಾಗುತ್ತಾರೆ. ಇದು ಟ್ವಿಸ್ಟ್ ಮಾಡುವಾಗ, ಜಂಪ್ ಮಾಡುವಾಗ ಜಿಗಿಯುವಾಗ ಮೊಣಕಾಲನ್ನು ತೀವ್ರವಾಗಿ ಬಾಗಿಸಿದಾಗ ಅಥವಾ ಹಠಾತ್ ಆಘಾತಕಾರಿ ಗಾಯದಿಂದಾಗಿ ಈ ಸಮಸ್ಯೆ ಕಾಣಿಸಿಕೊಳ್ಳಬಹುದು. ಇದನ್ನು ಗುಣಪಡಿಸುವ ಸೀಮಿತ ಚಿಕಿತ್ಸೆಗಳಿಂದಾಗಿ, ನೋವು ಹೆಚ್ಚಾಗಿರುತ್ತದೆ. ಹೆಚ್ಚಿನ ಬಾರಿ ಇದು ಅಪೂರ್ಣ ಚಿಕಿತ್ಸೆಗೆ ಕಾರಣವಾಗುತ್ತದೆ. ಚಿಕಿತ್ಸೆ ನೀಡದೆ ಬಿಟ್ಟರೆ, ಕಾರ್ಟಿಲೆಜ್ ಗಾಯಗಳು ಪ್ರೊಗ್ರೆಸ್ಸಿವ್ ಕೊಂಡ್ರೊಜೆನಿಕ್ ನಷ್ಟಕ್ಕೆ ಕಾರಣವಾಗಬಹುದು ಅಥವಾ ಕಾಲಕ್ರಮೇಣ ಕಾರ್ಟಿಲೆಜ್ ಕಳೆದುಹೋಗಬಹುದು ಎಂದು ಹೇಳಿದರು.

ಕೇವಲ ಕೀಹೋಲ್ ವಿಧಾನದ ಮೂಲಕ ರೋಗಿಗೆ ಒಂದೇ ಹಂತದ ಶಸ್ತ್ರಚಿಕಿತ್ಸೆ ಮಾಡಲಾಯಿತು. ಅಜಯ್ ಈಗ ಗುಣಮುಖವಾಗುವುದರ ಜೊತೆಗೆ ವ್ಯಾಯಾಮ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಸಹಜ ಸ್ಥಿತಿಗೆ ಕ್ಷಿಪ್ರವಾಗಿ ಮರಳುತ್ತಿದ್ದಾರೆ. ಶೀಘ್ರದಲ್ಲೇ ಅವರು ತಮ್ಮ ನೆಚ್ಚಿನ ಕ್ರೀಡೆಯನ್ನು ಮತ್ತೆ ಆಡಲು ಸಾಧ್ಯವಾಗುತ್ತದೆ ಎಂದು ಯುನೈಟೆಡ್ ಆಸ್ಪತ್ರೆಯ ಕನ್ಸಲ್ಟೆಂಟ್ ಆರ್ಥೋಪಿಡಿಶಿಯನ್ ಡಾ. ಪ್ರದ್ಯುಮ್ನ ಆರ್ ತಿಳಿಸಿದರು. ಇದನ್ನೂ ಓದಿ: ಬಿಎಸ್‍ವೈ ಅಂದ್ರೆ ಒಂದು ದೊಡ್ಡ ಶಕ್ತಿ, ಅವರ ಹೇಳಿಕೆಯಿಂದ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಲ್ಲ: ಬೊಮ್ಮಾಯಿ

ಯುನೈಟೆಡ್ ಆಸ್ಪತ್ರೆಯ ಸಂಸ್ಥಾಪಕರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಡಾ. ವಿಕ್ರಮ್ ಸಿದ್ದಾರೆಡ್ಡಿ ಮಾತನಾಡಿ, ನೂತನ ವಿಧಾನದ ತಂತ್ರಜ್ಞಾನದಲ್ಲಿ ರೋಗಿಯ ಕೀಲಿನಿಂದ ಸಂಗ್ರಹಿಸಿದ ರೋಗಿಯ ಕಾರ್ಟಿಲೆಜ್ ಕೋಶಗಳನ್ನು ಬಳಸಿಕೊಳ್ಳಲಾಗುತ್ತದೆ. ಈ ಅಂಗಾಂಶವನ್ನು ರೋಗಿಯ ರಕ್ತದ ಪ್ರೋಟೀನ್ ಸಮೃದ್ಧ ಭಾಗದೊಂದಿಗೆ ಬೆರೆಸಿ ಜೆಲ್ ತರಹದ ವಸ್ತುವನ್ನು ರೂಪಿಸಿಕೊಳ್ಳಲಾಗುತ್ತದೆ. ಇದನ್ನು ನೋವಿರುವ ಜಾಗಗಳಿಗೆ ಹಾಕುವುದರ ಮೂಲಕ ಕೆಲವು ವಾರಗಳಲ್ಲಿ ಹೊಸ ಕಾರ್ಟಿಲೆಜ್ ಆಗಿ ಬೆಳೆಯಲು ಅನುವು ಮಾಡಿಕೊಡಲಾಗುತ್ತದೆ. ಇದರಿಂದ ಕೀಲುಗಳಿಗೆ ಹೆಚ್ಚಿನ ಹಾನಿಯಾಗುವುದನ್ನು ತಡೆಯಬಹುದು ಮತ್ತು ಕೀಲುಗಳಲ್ಲಿ ಸಂಧಿವಾತ ಹೆಚ್ಚುವುದನ್ನು ತಪ್ಪಿಸುತ್ತದೆ ಎಂದರು.

ಕೋವಿಡ್ ಸಾಂಕ್ರಾಮಿಕ ರೋಗದ ನಂತರ ತಮ್ಮ ಕ್ರೀಡಾ ಚಟುವಟಿಕೆಗಳಿಗೆ ಮತ್ತೆ ಮರಳಿರುವ ಹೆಚ್ಚಿನ ಮಂದಿ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಯುನೈಟೆಡ್ ಹಾಸ್ಪಿಟಲ್ ಬೆಂಗಳೂರಿನಲ್ಲಿ ಮೂಲಸೌಕರ್ಯ, ಉಪಕರಣಗಳು, ಆಪರೇಷನ್ ಥಿಯೇಟರ್‌ಗಳು, ತರಬೇತಿ ಪಡೆದ ಸಿಬ್ಬಂದಿ, ರೋಗಿಗಳ ಯೋಗಕ್ಷೇಮಕ್ಕೆ ಮೀಸಲಾದ ನಿರ್ವಹಣೆ ಮತ್ತು ಭಾರತದ ಮೊದಲ ಆಟೋಲೋಗಸ್ ಕಾರ್ಟಿಲೆಜ್ ಟ್ರಾನ್ಸ್ಪ್ಲಾಂಟ್ ಸೌಲಭ್ಯಗಳ ಮೂಲಕ ಬೆಂಗಳೂರಿನ ಅತ್ಯುತ್ತಮ ಕ್ರೀಡೆ ಸಂಬಂಧಿತ ಗಾಯಗಳಿಗೆ ಚಿಕಿತ್ಸೆ ನೀಡುವ ಸುಸಜ್ಜಿತ ಆಸ್ಪತ್ರೆಗಳಲ್ಲಿ ಒಂದಾಗಿದೆ. ಕ್ರೀಡಾ ಸಮಸ್ಯೆಗಳ ನಿವಾರಣೆಗೆ ಇದೊಂದು ಉತ್ತಮವಾದ ಸ್ಥಳ ಎಂದು ಜಯನಗರದ ಯುನೈಟೆಡ್ ಆಸ್ಪತ್ರೆಯ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಡಯಾಗ್ನೋಸ್ಟಿಕ್ ಮತ್ತು ವೆಲ್ನೆಸ್ ಮುಖ್ಯಸ್ಥ ಡಾ. ಶಾಂತಕುಮಾರ್ ಮುರುಡಾ ಹೇಳಿದರು. ಇದನ್ನೂ ಓದಿ: ಕಸ ಹಾಕಿದ್ದಕ್ಕೆ ಸಿಎಂ ನಿವಾಸಕ್ಕೆ 10,000 ರೂ. ದಂಡ ವಿಧಿಸಿದ ಕಾರ್ಪೊರೇಷನ್

ಯುನೈಟೆಡ್ ಆಸ್ಪತ್ರೆಯಲ್ಲಿ ಎಲ್ಲಾ ಕ್ರೀಡೆಗಳಿಗೆ ಸಂಬಂಧಿಸಿದ ಗಾಯಗಳಿಗೆ ಚಿಕಿತ್ಸೆ ನೀಡಲು ವಿಶ್ವದ ಅತ್ಯುತ್ತಮ ತಂತ್ರಗಳನ್ನು ಬಳಸಲಾಗುತ್ತದೆ. ಆಟೋಲೋಗಸ್ ಕಾರ್ಟಿಲೆಜ್ ಟ್ರಾನ್ಸ್‌ಪ್ಲಾಂಟ್ ಅನ್ನು ಒಂದೇ ಸೆಟ್ಟಿಂಗ್‌ನಲ್ಲಿ ಮಾಡಲಾಗುತ್ತದೆ. ಕೀಹೋಲ್ ಶಸ್ತ್ರಚಿಕಿತ್ಸೆ, ಸಾಂಪ್ರದಾಯಿಕ 6 ವಾರಗಳ ಅಂತರದಲ್ಲಿ ನಡೆಯುವ 2 ಎಸಿಐ ಗಿಂತ ಕಡಿಮೆ ವೆಚ್ಚದಾಯಕವಾಗಿದೆ ಮತ್ತು ರೋಗಿಗೆ ಅನುಕೂಲಕರವಾಗಿದೆ ಎಂದು ಡಾ. ಮುರುಡಾ ವಿವರಿಸಿದರು.

ಹಲವಾರು ವೈದ್ಯರನ್ನು ಭೇಟಿ ಮಾಡಿದ ಬಳಿಕ ಯುನೈಟೆಡ್ ಆಸ್ಪತ್ರೆಯ ಕನ್ಸಲ್ಟೆಂಟ್ ಆರ್ಥೋಪೆಡಿಶಿಯನ್ ಡಾ. ಪ್ರದ್ಯುಮ್ನ ಅವರನ್ನು ಭೇಟಿಯಾದೆ. ನನ್ನ ಪಾದದ ಕಾರ್ಟಿಲೇಜ್ ಹಾನಿಗೊಳಗಾಗಿದ್ದನ್ನು ಕಂಡು ವೈದ್ಯರಾದ ಪ್ರದ್ಯುಮ್ನ ಅವರು ಆರ್ಥೋಸ್ಕೊಪಿ ಮೂಲಕ ಆಟೋಲೋಗಸ್ ಕಾರ್ಟಿಲೆಜ್ ಕಸಿ ಮಾಡಲು ನಿರ್ಧರಿಸಿದರು. ಕಡಿಮೆ ಇನ್ ವೇಸಿವ್ ಸರ್ಜರಿ (ಕೀಹೋಲ್) ಮೂಲಕ ಹಾನಿಗೊಳಗಾದ ಕಾರ್ಟಿಲೆಜ್‌ಗೆ ಚಿಕಿತ್ಸೆ ನೀಡಲು ನಿರ್ಧರಿಸಿದರು. ಇದರಿಂದ ಒಂದೇ ಶಸ್ತ್ರಚಿಕಿತ್ಸೆಯ ಮೂಲಕ ನನ್ನ ಗಾಯಕ್ಕೆ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳಲು ಸಾಧ್ಯವಾಯಿತು ಎಂದು ಶಸ್ತ್ರಚಿಕಿತ್ಸೆಗೆ ಒಳಪಟ್ಟ ಕ್ರೀಡಾಪಟು ಅಜಯ್ ಹೇಳಿದರು.

Live Tv

Leave a Reply

Your email address will not be published.

Back to top button