ಲಕ್ನೋ: ಕೇಂದ್ರವು ಹೊಸದಾಗಿ ಪ್ರಾರಂಭಿಸಿರುವ ಅಗ್ನಿಪಥ್ ಯೋಜನೆಯಡಿಯಲ್ಲಿ ಭಾರತೀಯ ವಾಯುಪಡೆ(IAF) ಸಿಬ್ಬಂದಿ ಮೊದಲ ಬ್ಯಾಚ್‍ನ ನೇಮಕಾತಿಗಾಗಿ ಪರೀಕ್ಷೆಯು ಭಾನುವಾರ ಯುಪಿಯ ಕಾನ್ಪುರದಲ್ಲಿ ಬಿಗಿ ಪೊಲೀಸ್ ಭದ್ರತೆಯ ನಡುವೆ ನಡೆಯಿತು.
Advertisement
ದೇಶದಾದ್ಯಂತ ಜುಲೈ 24 ರಿಂದ ಜುಲೈ 31 ರವರೆಗೆ ನಡೆಯಲಿರುವ ಪರೀಕ್ಷೆಯಲ್ಲಿ ನಗರದಿಂದ ಸುಮಾರು 2.5 ಲಕ್ಷ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಅಗ್ನಿವೀರ್ ಪರೀಕ್ಷೆಗೆ ಒಟ್ಟು 11 ಕೇಂದ್ರಗಳನ್ನು ನಿಗದಿಪಡಿಸಲಾಗಿದ್ದು, ಈ ಪೈಕಿ ಆರು ಕೇಂದ್ರಗಳು ಕಾನ್ಪುರ ಔಟರ್‌ನಲ್ಲಿವೆ. ಪ್ರತಿ ಕೇಂದ್ರದಲ್ಲಿ ಪ್ರತಿ ದಿನ 1,875 ಅಭ್ಯರ್ಥಿಗಳು ಮೂರು ಪಾಳಿಯಲ್ಲಿ ಪರೀಕ್ಷೆಗಳನ್ನು ಬರೆಯುತ್ತಿದ್ದಾರೆ. ಇದನ್ನೂ ಓದಿ: 5ನೇ ಮಹಡಿ ಕಿಟಕಿಯಿಂದ ಬೀಳುತ್ತಿದ್ದ 2 ವರ್ಷದ ಕಂದಮ್ಮನನ್ನು ರಕ್ಷಿಸಿದ – ನಮ್ಮ ಹೀರೋ ಎಂದ ನೆಟ್ಟಿಗರು
Advertisement
Advertisement
ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದ್ದು, ವಾಯುಪಡೆಯ ಸಿಬ್ಬಂದಿಯನ್ನು ಸಹ ನಿಯೋಜಿಸಲಾಗಿದೆ. ಹೆಚ್ಚುವರಿ ಉಪ ಪೊಲೀಸ್ ಆಯುಕ್ತ ಬ್ರಿಜೇಶ್ ಶ್ರೀವಾಸ್ತವ ಈ ಕುರಿತು ಮಾತನಾಡಿದ್ದು, ವಾಯುಪಡೆಯ ಸಹಾಯದಿಂದ ಪರೀಕ್ಷೆಯನ್ನು ಶಾಂತಿಯುತವಾಗಿ ನಡೆಸಲಾಗುತ್ತಿದೆ. ಎಲ್ಲಾ ಕೇಂದ್ರಗಳನ್ನು ಕಟ್ಟುನಿಟ್ಟಾದ ಸಿಸಿಟಿವಿ ಮತ್ತು ಡ್ರೋನ್ ವೀಕ್ಷಣೆಗೆ ಒಳಪಡಿಸಲಾಗಿದೆ. ಎಲ್ಲೆಡೆ ಭದ್ರತೆಯನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಅಗ್ನಿಪಥ್‌ಗೆ ಭರ್ಜರಿ ಪ್ರತಿಕ್ರಿಯೆ – 4 ದಿನಕ್ಕೆ 94 ಸಾವಿರ ಅರ್ಜಿ
Advertisement
ಭಾರತೀಯ ಯುವಕರಿಗೆ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಲು ಕೇಂದ್ರವು ಜೂನ್ 14 ರಂದು ಹೊಸ ಅಲ್ಪಾವಧಿಯ ನೇಮಕಾತಿ ನೀತಿಯನ್ನು ಅನಾವರಣಗೊಳಿಸಿತ್ತು. ಅಗ್ನಿಪಥ್ ಎಂದು ಕರೆಯಲ್ಪಡುವ ಈ ಯೋಜನೆಯು 17.5 ರಿಂದ 21 ವರ್ಷ ವಯಸ್ಸಿನ ಯುವಕರನ್ನು ನಾಲ್ಕು ವರ್ಷಗಳ ಅವಧಿಗೆ ‘ಅಗ್ನಿವೀರರು’ ಎಂದು ಸೇವೆಗೆ ನಿಯೋಜಿಸಲಾಗುವುದು. ಇದನ್ನೂ ಓದಿ: ಭೂಕುಸಿತದ ಕಾರಣ ತಿಳಿಯಲು ವಿಜ್ಞಾನಿಗಳ ನೆರವು: ಬಿ.ಸಿ.ನಾಗೇಶ್