ಮೈಸೂರು: ದಸರಾ (Mysuru dasara) ಆನೆ ಬಲರಾಮನಿಗೆ (Elephant Balarama) ಬಂದೂಕಿನಿಂದ ಗುಂಡು ಹೊಡೆದಿದ್ದ ಜಮೀನೊಂದರ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ.
ಪಿರಿಯಾಪಟ್ಟಣ ತಾಲ್ಲೂಕಿನ ಭೀಮನಕಟ್ಟೆ ಸಾಕಾನೆ ಶಿಬಿರಕ್ಕೆ ಸಮೀಪದಲ್ಲಿದ್ದ ಜಮೀನಿಗೆ ಬಲರಾಮ ಆನೆ ಹೋಗಿತ್ತು. ಈ ವೇಳೆ ಜಮೀನಿನ ಮಾಲೀಕ ಸುರೇಶ್ ಎಂಬಾತ ಸಿಂಗಲ್ ಬ್ಯಾರಲ್ ಬಂದೂಕಿನಿಂದ ಆನೆಗೆ ಗುಂಡು ಹಾರಿಸಿದ್ದ. ಇದರಿಂದ ಬಲರಾಮ ಆನೆ ತೊಡೆ ಭಾಗಕ್ಕೆ ಗುಂಡು ಹೊಕ್ಕಿ ಗಾಯಗೊಂಡಿತ್ತು. ಇದನ್ನೂ ಓದಿ: ಬಸ್ ನಿಲ್ದಾಣದಲ್ಲಿ ಅಧಿಕಾರಿಗಳಿಗೆ ಮಚ್ಚು ತೋರಿಸಿದ ಪ್ರಕರಣ – ದಂಪತಿ ವಿರುದ್ಧ ರೌಡಿಶೀಟರ್ ಕೇಸ್ ಹಾಕಿ ಅರೆಸ್ಟ್
Advertisement
Advertisement
ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಪಶುವೈದ್ಯಾಧಿಕಾರಿ ಡಾ.ರಮೇಶ್ ಸದ್ಯ ಆನೆಗೆ ಚಿಕಿತ್ಸೆ ನೀಡುತ್ತಿದ್ದಾರೆ. ಬಲರಾಮ ಚೇತರಿಸಿಕೊಂಡಿದ್ದಾನೆ. ವನ್ಯಜೀವಿ ಕಾಯ್ದೆ ಉಲ್ಲಂಘನೆ ಆರೋಪದಡಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆತನಿಂದ ಬಂದೂಕು, ಕಾರ್ಟ್ರಿಜ್‌ನ್ನು ವಶಪಡಿಸಿಕೊಳ್ಳಲಾಗಿದೆ. ಜಮೀನು ಮಾಲೀಕನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಈಗ 14 ದಿನ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
Advertisement
Advertisement
ಬಲರಾಮ ಆನೆ ಮೈಸೂರು ದಸರಾ ಮಹೋತ್ಸವ ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಿತ್ತು. 14 ಬಾರಿ ಚಿನ್ನದ ಅಂಬಾರಿಯನ್ನು ದಸರಾ ಮೆರವಣಿಗೆಯಲ್ಲಿ ಹೊತ್ತಿದೆ. ಇದನ್ನೂ ಓದಿ: ಬೆಂಗಳೂರಲ್ಲಿ ಹೆಚ್ಚಾಗ್ತಿದೆ ನಕಲಿ ವೈದ್ಯರ ಹಾವಳಿ – ಸಾವಿರಕ್ಕೂ ಹೆಚ್ಚು ಡೂಪ್ಲಿಕೇಟ್ ಡಾಕ್ಟರ್ಸ್!