ಬೆಳಗಾವಿ: ಚಿತ್ರನಟ ಶಿವರಂಜನ್ ಬೋಳ್ಳಣ್ಣವರ್ ಮೇಲೆ ಬೈಲಹೊಂಗಲ ಪಟ್ಟಣದಲ್ಲಿ ಗುಂಡಿನ ದಾಳಿ ನಡೆದಿದ್ದು, ಅದೃಷ್ಟವಶಾತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದ ಹನುಮಂತ ದೇವಸ್ಥಾನ ಬಳಿಯಿರುವ ಮನೆ ಮುಂದೆ ಅಪರಿಚಿತ ವ್ಯಕ್ತಿ ಶಿವರಂಜನ್ ಮೇಲೆ ಮೂರು ಸುತ್ತು ಗುಂಡಿನ ದಾಳಿ ನಡೆಸಿದ್ದಾನೆ. ಮಿಸ್ ಫೈರ್ ಆಗಿದ್ದರಿಂದ ಅದೃಷ್ಟವಶಾತ್ ಪ್ರಾಣಾಪಾಯದಿಂದ ಶಿವರಂಜನ್ ಪಾರಾಗಿದ್ದಾರೆ. ಇದನ್ನೂ ಓದಿ: ರಾಷ್ಟ್ರೀಯ ಹೊಸ ಲಾಂಛನಕ್ಕೆ ವಿಪಕ್ಷಗಳ ಆಕ್ರೋಶ – ಆಕ್ರಮಣಕಾರಿ ಲಾಂಛನ ಅಂತ ಕಟು ಟೀಕೆ
ಸ್ಥಳಕ್ಕೆ ಬೆಳಗಾವಿ ಎಸ್‍ಪಿ ಡಾ. ಸಂಜೀವ ಪಾಟೀಲ್, ಎಎಸ್‍ಪಿ ನಂದಗಾವಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಫೈರಿಂಗ್ ಮಾಡಿರೋ ಆರೋಪಿ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.