ಬಾಲಿವುಡ್ ನಟ ಸಲ್ಮಾನ್ ಖಾನ್ ಮನೆ ಮುಂದೆ ನಡೆದ ಗುಂಡಿನ ದಾಳಿಯ ನಂತರ ಅವರ ಕುಟುಂಬ ಸಾಕಷ್ಟು ಆತಂಕ್ಕೆ ಒಳಗಾಗಿದೆ. ಸಲ್ಮಾನ್ ಹತ್ಯೆ ಮಾಡಲು ನಾನಾ ರೀತಿಯ ಕಸರತ್ತುಗಳನ್ನು ದುರುಳರು ಮಾಡುತ್ತಿದ್ದಾರೆ. ಹಾಗಾಗಿ ತಾವಿರುವ ಅಪಾರ್ಟ್ಮೆಂಟ್ ಅನ್ನು ಖಾಲಿ ಮಾಡಲು ಸಲ್ಮಾನ್ ನಿರ್ಧರಿಸಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು. ಈ ಕುರಿತು ಸಲ್ಮಾನ್ ಸಹೋದರ ಅರ್ಬಾಜ್ ಮಾಹಿತಿ ನೀಡಿದ್ದು, ಅಂತಹ ಯೋಚನೆ ಸದ್ಯಕ್ಕಿಲ್ಲ ಅಂದಿದ್ದಾರೆ.
Advertisement
ಗುಂಡಿನ ದಾಳಿಯನ್ನು ಮುಂಬೈ ಪೊಲೀಸರು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಈಗಾಗಲೇ ಗುಂಡಿನ ದಾಳಿ ಮಾಡಿದವರನ್ನು ಅರೆಸ್ಟ್ ಮಾಡಲಾಗಿದೆ. ನಂತರ ಗನ್ ಅನ್ನು ನದಿಯಲ್ಲಿ ಬೀಸಾಕಿದ್ದನ್ನು ಪತ್ತೆ ಹಚ್ಚಿ, ಗನ್ ಗಳನ್ನೂ ವಶಕ್ಕೆ ತೆಗೆದುಕೊಳ್ಳಲಾಗಿದೆ. ಇದೀಗ ಗನ್ ಸಪ್ಲೈ ಮಾಡಿದವರನ್ನೂ ಪೊಲೀಸರು ಬಂಧಿಸಿದ್ದಾರೆ.
Advertisement
Advertisement
ಗುಂಡಿನ ದಾಳಿ ನಡೆಸಿದ ಆರೋಪಿಗಳಿಗೆ ಗನ್ ಸರಬರಾಜು ಮಾಡಿದ್ದು ಸುಭಾಷ್ ಚಂದರ್ ಮತ್ತು ಅನುಜ್ ಥಾಪಸ್ ಎಂದು ಗೊತ್ತಾಗಿದ್ದು, ಈ ಇಬ್ಬರನ್ನೂ ಪಂಜಾಬ್ (Punjab) ನಲ್ಲಿ ಮುಂಬೈ ಪೊಲೀಸರು ಬಂಧಿಸಿದ್ದಾರೆ. ಮಾರ್ಚ್ 15ರಂದು ಆರೋಪಿಗಳಿಗೆ ಇವರು ಪಿಸ್ತೂಲ್ ಮತ್ತು ಕಾಟ್ರಿಜ್ ಗಳನ್ನು ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
Advertisement
ಈ ನಡುವೆ ಮುಂಬೈ ಪೊಲೀಸರಿಂದ ಮತ್ತೊಂದು ಆತಂಕಕಾರಿ ವಿಷಯ ಬಹಿರಂಗವಾಗಿದೆ. ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ (Lawrence Bishnoi) ಹೆಸರಿನಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಮನೆಯಿಂದ ಕ್ಯಾಬ್ ಬುಕ್ ಮಾಡಿದ್ದಕ್ಕಾಗಿ ಯುವಕನನ್ನು ಬಂಧಿಸಲಾಗಿದೆ. ಆರೋಪಿ ಉತ್ತರ ಪ್ರದೇಶದ (Uttar Pradesh) ಗಾಜಿಯಾಬಾದ್‌ನ 20 ವಯಸ್ಸಿನ ರೋಹಿತ್ ತ್ಯಾಗಿ. ಆರೋಪಿಯು, ನಟ ಸಲ್ಮಾನ್ ಖಾನ್ ಮನೆ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನಿಂದ ಬಾಂದ್ರಾ ಪೊಲೀಸ್ ಠಾಣೆಗೆ ಲಾರೆನ್ಸ್ ಬಿಷ್ಣೋಯ್ ಹೆಸರಿನಲ್ಲಿ ಕ್ಯಾಬ್ ಬುಕ್ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಕ್ಯಾಬ್ ಡ್ರೈವರ್ ಸಲ್ಮಾನ್ ಖಾನ್ ಅವರ ಮನೆಯಲ್ಲಿರುವ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ಗೆ ಬಂದು ಬುಕ್ಕಿಂಗ್ ಬಗ್ಗೆ ಅಲ್ಲಿನ ವಾಚ್‌ಮನ್ ಬಳಿ ಕೇಳಿದ್ದಾರೆ. ಮೊದಲು ದಿಗ್ಭ್ರಮೆಗೊಂಡ ವಾಚ್‌ಮನ್, ತಕ್ಷಣ ಬುಕಿಂಗ್ ಬಗ್ಗೆ ಹತ್ತಿರದ ಬಾಂದ್ರಾ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಅದರಂತೆ ಮುಂಬೈನ ಬಾಂದ್ರಾ ಪೊಲೀಸರು, ಕ್ಯಾಬ್ ಚಾಲಕನನ್ನು ವಿಚಾರಣೆಗೆ ಒಳಪಡಿಸಿದರು. ಆನ್‌ಲೈನ್‌ನಲ್ಲಿ ಕ್ಯಾಬ್ ಬುಕ್ ಮಾಡಿದ ವ್ಯಕ್ತಿಯ ಮಾಹಿತಿಯನ್ನು ಟ್ರ್ಯಾಕ್ ಮಾಡಿದ್ದಾರೆ. ಕ್ಯಾಬ್ ಬುಕ್ ಮಾಡಿದ ವ್ಯಕ್ತಿ ಘಾಜಿಯಾಬಾದ್‌ನ 20 ವರ್ಷದ ವಿದ್ಯಾರ್ಥಿಯಾಗಿದ್ದು, ರೋಹಿತ್ ತ್ಯಾಗಿ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಹೆಸರಿನಲ್ಲಿ ಕ್ಯಾಬ್ ಬುಕ್ ಮಾಡಿರುವುದು ಚೇಷ್ಟೆಗಾಗಿ ಎಂದು ತನಿಖೆಯ ವೇಳೆ ತಿಳಿದುಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪೊಲೀಸರು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಬಂಧಿಸಿದರು. ನಂತರ ಅವರನ್ನು ಮುಂಬೈಗೆ ಕರೆತಂದು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು.