ಬರ್ತ್‍ಡೇ ಪಾರ್ಟಿಯಲ್ಲಿ ಹುಬ್ಬಳ್ಳಿಯಲ್ಲಿ ಮೊಳಗಿದ ಗುಂಡಿನ ಸದ್ದು!

Public TV
1 Min Read
hubballi party shoot

ಹುಬ್ಬಳ್ಳಿ: ಹುಟ್ಟುಹಬ್ಬದ ಪಾರ್ಟಿಯಲ್ಲಿ ನಗರದಲ್ಲಿ ಗುಂಡಿನ ಸದ್ದು ಮೊಳಗಿರುವ ಅನುಮಾನ ಮೂಡಿದೆ. ನಗರದ ಹೊರವಲಯದ ಕುಸುಗಲ್ ಸಮೀಪದಲ್ಲಿ ಕಲಬುರಗಿ ಫಾರ್ಮ್ ಹೌಸ್‍ನಲ್ಲಿ ಆರ್.ಟಿ.ಐ. ಕಾರ್ಯಕರ್ತನ ಪುತ್ರ ಮತ್ತು 100ಕ್ಕೂ ಹೆಚ್ಚು ರೌಡಿಗಳು ಒಂದೆಡೇ ಸೇರಿ ಭರ್ಜರಿ ಪಾರ್ಟಿ ಮಾಡುವಾಗ ಈ ಪ್ರಕರಣ ನಡೆದಿದೆ ಎನ್ನಲಾಗಿದೆ.

WhatsApp Image 2022 06 06 at 4.43.55 PM 1

ಆರ್‌ಟಿಐ ಕಾರ್ಯಕರ್ತರಾದ ಕೇಶ್ವಾಪುರದ ಫಿಲೋಮಿನಾ ಪೌಲ್ ಪುತ್ರ ಸುಂದರ ಪೌಲ್ ಹುಟ್ಟುಹಬ್ಬದ ನಿಮಿತ್ತವಾಗಿ ರಾತ್ರಿ ಫಾರ್ಮ್‍ಹೌಸ್‍ವೊಂದರಲ್ಲಿ ಗುಂಡು-ತುಂಡಿನ ಪಾರ್ಟಿ ಆಯೋಜನೆ ಮಾಡಲಾಗಿತ್ತು. ಈ ಪಾರ್ಟಿಯಲ್ಲಿ ಹೊಸೂರು, ಸೆಟಲ್‍ಮೆಂಟ್ ಸೇರಿದಂತೆ ನಗರದ ವಿವಿಧ ಪ್ರದೇಶದ ರೌಡಿ ಶೀಟರ್‍ಗಳು ಪಾಲ್ಗೊಂಡಿದ್ದರು. ಕೇಕ್ ಕತ್ತರಿಸುವ ಸಮಯದಲ್ಲಿ ವೇದಿಕೆ ಮೇಲೆ ಖುಷಿಯಿಂದ ಆರು ಸುತ್ತಿನ ಗುಂಡು ಹಾರಿಸಿರುವ ಅನುಮಾನ ಮೂಡಿದೆ.‌ ಇದನ್ನೂ ಓದಿ: ಟ್ರಕ್‍ಗಳ ಮುಖಾಮುಖಿ ಡಿಕ್ಕಿ – ಚಾಲಕ ಸಾವು

download 34

ಸುದ್ದಿ ತಿಳಿಯುತ್ತಿದ್ದಂತೆ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಇನ್ಸ್‌ಪೆಕ್ಟರ್ ರಮೇಶ್ ಗೋಕಾಕ್ ನೇತೃತ್ವದ ತಂಡ ಫಾರ್ಮ್ ಹೌಸ್‍ಗೆ ಭೇಟಿ ನೀಡಿ ಪರಿಶೀಲನೆಗೆ ಮುಂದಾಗಿದೆ. ಸದ್ಯ ಫಿಲೋಮಿನ್ ಪೌಲ್ ಬಳಿ ಇದ್ದ ಲೈಸೆನ್ಸ್ ಪಿಸ್ತೂಲ್ ವಶಕ್ಕೆ ಪಡೆದಿರುವ ಪೊಲೀಸರು, ಎಫ್‍ಐಆರ್ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ. ಸುಂದರ್ ಪೌಲ್ ಉಪಟಳ ಇದೇ ಮೊದಲಲ್ಲ, ಈ ಹಿಂದೇ ಕಾಲೇಜು ಕ್ಯಾಂಪಸ್‍ನಲ್ಲಿ ಪಿಸ್ತೂಲ್ ತೋರಿಸಿ ಸುದ್ದಿಯಾಗಿದ್ದ. ಇದನ್ನೂ ಓದಿ : ಯಶ್ ಮುಂದಿನ ಸಿನಿಮಾ ನರ್ತನ್ ಜೊತೆ ಫಿಕ್ಸ್ : ಘೋಷಣೆಯೊಂದೇ ಬಾಕಿ

Share This Article
Leave a Comment

Leave a Reply

Your email address will not be published. Required fields are marked *