ನವದೆಹಲಿ: ಪಟಾಕಿ ಹೊಡೆಯುತ್ತಿದ್ದ ವೇಳೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದು, ಇಬ್ಬರು ಸಾವನ್ನಪ್ಪಿರುವ ಘಟನೆ ದೆಹಲಿಯ (Delhi) ಶಹದಾರ (Shahadar) ಪ್ರದೇಶದ ಫಾರ್ಶ್ ಬಜಾರ್‌ನಲ್ಲಿ ನಡೆದಿದೆ.
ಮೃತರನ್ನು ಆಕಾಶ್ ಶರ್ಮಾ(44), ಆತನ ಸೋದರಳಿಯ ರಿಷಬ್ ಶರ್ಮಾ(16) ಎಂದು ಗುರುತಿಸಲಾಗಿದೆ. ಈ ಘಟನೆಯಲ್ಲಿ ಮೃತ ಆಕಾಶ್ ಮಗ ಕ್ರಿಶ್ ಶರ್ಮಾ ಗಂಭೀರವಾಗಿ ಗಾಯಗೊಂಡಿದ್ದಾನೆ.
ಗುರುವಾರ ರಾತ್ರಿ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಗುಂಡಿಕ್ಕಿ ಕೊಲೆ ಮಾಡಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಸಿದ್ದಗಂಗಾ ಶ್ರೀಗಳ ಗದ್ದುಗೆಗೆ ಪೂಜೆ ಸಲ್ಲಿಸಿದ ಹೆಚ್‍ಡಿಕೆ
ಸೆರೆಯಾದ ದೃಶ್ಯದಲ್ಲಿ, ಮೂವರು ತಮ್ಮ ಮನೆಯ ಹೊರಗೆ ಕಿರಿದಾದ ರಸ್ತೆಯಲ್ಲಿ ಪಟಾಕಿ ಹೊಡೆಯುತ್ತಿರುವುದು ಕಂಡು ಬಂದಿದೆ. ಇದೇ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ಅಪ್ರಾಪ್ತ ಬಾಲಕ ಹಾಗೂ ಶೂಟರ್, ಆಕಾಶ್‌ಗೆ ಸತತವಾಗಿ 5 ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ. ಈ ಸಮಯದಲ್ಲಿ ರಕ್ಷಿಸಲು ಬಂದಿದ್ದ ಆಕಾಶ್ ಸೋದರಳಿಯ ರಿಷಬ್ ಶರ್ಮಾಗೂ ಗುಂಡು ತಗುಲಿ ಸಾವನ್ನಪ್ಪಿದ್ದಾರೆ. ಓಡಿಕೊಂಡು ಬಂದ ಆಕಾಶ್ ಮಗನಿಗೂ ಗುಂಡು ತಗುಲಿದ್ದು, ಗಂಭೀರ ಗಾಯಗೊಂಡಿದ್ದಾನೆ.
ಪೊಲೀಸರ ಮಾಹಿತಿಯ ಪ್ರಕಾರ, ಅಪ್ರಾಪ್ತ ಬಾಲಕ ಹಾಗೂ ಮೃತ ಆಕಾಶ್‌ನ ದೂರದ ಸಂಬಂಧಿಯಾಗಿದ್ದು, ಕೆಲವು ತಿಂಗಳ ಹಿಂದೆ ಆತನಿಂದ 70,000 ರೂ. ಹಣ ಸಾಲ ಪಡೆದಿದ್ದರು. ತಿಂಗಳುಗಳು ಕಳೆದಿದ್ದರೂ ಹಣವನ್ನು ಹಿಂದಿರುಗಿಸಿರಲಿಲ್ಲ ಹಾಗೂ ಆತ ಎಷ್ಟೇ ಕರೆ ಮಾಡಿದರೂ ಸ್ವೀಕರಿಸಿರಲಿಲ್ಲ. ಇದರಿಂದಾಗಿ ಆತನನ್ನು ಕೊಲೆ ಮಾಡುವಂತೆ ಶೂಟರ್‌ಗೆ ಅಪ್ರಾಪ್ತ ಬಾಲಕ ಸುಪಾರಿ ಕೊಟ್ಟಿರುವುದಾಗಿ ತಿಳಿದುಬಂದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು 17 ವರ್ಷದ ಅಪ್ರಾಪ್ತ ಬಾಲಕನನ್ನು ವಶಕ್ಕೆ ಪಡೆದಿದ್ದಾರೆ.ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರದ ಹಗರಣಗಳ ಬಗ್ಗೆ ಸಿನಿಮಾ ಮಾಡಿದ್ರೆ ಬಾಕ್ಸ್ಆಫೀಸ್ ಹಿಟ್ ಆಗುತ್ತೆ: ಸಿ.ಸಿ ಪಾಟೀಲ್