ಮುಂಬೈ: ರೋಹಿತ್ ಶೆಟ್ಟಿ (Rohit Shetty) ಮನೆ ಮೇಲೆ ನಡೆಸಿದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತೆ ಆರು ಜನರನ್ನು ಅರೆಸ್ಟ್ ಮಾಡಿದ್ದು, ಈವರೆಗೂ 11 ಜನರನ್ನು ಬಂಧಿಸಿದ್ದಾರೆ.
ಆದಿತ್ಯ ಗಯಾಕಿ (19), ಸಿದ್ಧಾರ್ಥ್ ಯೆನ್‌ಪುರೆ (20), ಸಮರ್ಥ್ ಪೊಮಾಜಿ (18), ಸ್ವಪ್ನಿಲ್ ಸಕತ್ (23) ಮತ್ತು ಆಸಾರಾಮ್ ಫಸಲೆ ಬಂಧಿತ ಆರೋಪಿಗಳು. ಆರೋಪಿಗಳು ಐದು ಸುತ್ತು ಗುಂಡು ಹಾರಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಭಾರತದ ವಿರುದ್ಧ ಹೀನಾಯ ಸೋಲು – ಪಾಕಿನ ಇಬ್ಬರು ಸ್ಟಾರ್ ಆಟಗಾರರು ಔಟ್
ಪ್ರಕರಣಕ್ಕೆ ಸಂಬಂಸಿದಂತೆ ಭಾನುವಾರ (ಫೆ.15) ರಾತ್ರಿ ಹರಿಯಾಣ ಮತ್ತು ರಾಜಸ್ಥಾನದಿಂದ ಆರೋಪಿ ಶೂಟರ್ ದೀಪಕ್ ಶರ್ಮಾ ಸೇರಿದಂತೆ ಒಟ್ಟು ಐವರನ್ನು ಪೊಲೀಸರು ಬಂಧಿಸಿದ್ದರು. ಇನ್ನೂ ಈ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಸದಸ್ಯ ಶುಭಮ್ ಲೋಂಕರ್ ಕೂಡ ಒಬ್ಬನಾಗಿದ್ದು, ಗ್ಯಾಂಗ್ ಗುಂಡಿನ ದಾಳಿಯ ಹೊಣೆ ಹೊತ್ತುಕೊಂಡಿದೆ.
ಫೆ.1ರಂದು ಬೆಳಗಿನ ಜಾವ 12:45ಕ್ಕೆ ಜುಹು ಪ್ರದೇಶದಲ್ಲಿರುವ ರೋಹಿತ್ ಶೆಟ್ಟಿ ಅವರ ಒಂಬತ್ತು ಅಂತಸ್ತಿನ ಕಟ್ಟಡದ ಮೊದಲ ಮಹಡಿ ಮೇಲೆ ಐದು ಸುತ್ತು ಗುಂಡು ಹಾರಿಸಿದ್ದರು. ಆ ಪೈಕಿ ಒಂದು ಗುಂಡು ಜಿಮ್‌ನ ಗಾಜಿಗೆ ತಗುಲಿತು.ಇದನ್ನೂ ಓದಿ: ಇವರ ಸಾಧನೆ ಸಾಲದ ಹೊರೆ ಅಷ್ಟೇ – ಸರ್ಕಾರದ 1000 ದಿನಗಳ ಸಂಭ್ರಮಕ್ಕೆ ನಿಖಿಲ್ ಲೇವಡಿ

