ಆನೇಕಲ್: ಇಲ್ಲಿನ ಅತ್ತಿಬೆಲೆಯಲ್ಲಿ ಪಟಾಕಿ ಅಂಗಡಿಗೆ (Firework Shop) ಬೆಂಕಿ ಬಿದ್ದಿದ್ದು, 13 ಕಾರ್ಮಿಕರು ಸಜೀವ ದಹನವಾಗಿದ್ದಾರೆ. ಇನ್ನೂ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ.
ದುರಂತಕ್ಕೀಡಾದ ಪಟಾಕಿ ಅಂಗಡಿಯಲ್ಲಿ 20 ಮಂದಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಕಾರ್ಮಿಕರು ಸಂಬಂಧಿಕರ ಗೋಳಾಟ ಹೇಳತೀರದಾಗಿದೆ. ಇದನ್ನೂ ಓದಿ: ಇಸ್ರೇಲ್, ಪ್ಯಾಲೆಸ್ಟೈನ್ ಮಧ್ಯೆ ಕಾದಾಟ ಯಾಕೆ? 6 ದಿನ ನಡೆದ ಯುದ್ಧದಲ್ಲಿ ಏನಾಯ್ತು? – ಇಲ್ಲಿದೆ ಪೂರ್ಣ ಮಾಹಿತಿ
ಕ್ಯಾಂಟರ್‌ನಿಂದ ಪಟಾಕಿ ಅನ್‌ಲೋಡ್ ಮಾಡುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದೆ. ದೀಪಾವಳಿಗಾಗಿ ಕೋಟ್ಯಂತರ ರೂಪಾಯಿ ವ್ಯವಹಾರ ಮಾಡುವ ಬಾಲಾಜಿ ದೊಡ್ಡ ಪಟಾಕಿ ಗೋಡೌನ್‌ನಿಂದ ಶುರುವಾದ ಬೆಂಕಿ, ಅಕ್ಕಪಕ್ಕದ ನಾಲ್ಕೈದು ಅಂಗಡಿಗಳಿಗೂ ವ್ಯಾಪಿಸಿದೆ. ನೋಡ ನೋಡುತ್ತಿದ್ದಂತೆ ಕ್ಯಾಂಟರ್, 2 ಬೊಲೆರೋ, 4 ಬೈಕ್ ಸುಟ್ಟು ಭಸ್ಮವಾಗಿವೆ.
ಮಾಲೀಕ ನವೀನ್ ಅನ್ನುವವರಿಗೆ ಸುಟ್ಟ ಗಾಯಗಳಾಗಿವೆ. ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ (Bengaluru Rural) ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ನಿಖರ ಕಾರಣ ತಿಳಿದು ಬಂದಿಲ್ಲ. ಪರಿಶೀಲನೆಗಾಗಿ ಎಫ್‌ಎಸ್‌ಎಲ್ ಟೀಂ ಸ್ಥಳಕ್ಕೆ ಭೇಟಿ ನೀಡಲಿದೆ. ಇನ್ನೂ ಮಳಿಗೆ ಲೈಸೆನ್ಸ್ ಬಗ್ಗೆಯೂ ಪರಿಶೀಲನೆ ಮಾಡುವುದಾಗಿ ಎಸ್ಪಿ ಹೇಳಿದ್ದಾರೆ. ಇದನ್ನೂ ಓದಿ: ಪ್ರಧಾನಿ ಮೋದಿ ಹತ್ಯೆ, ಮೋದಿ ಸ್ಟೇಡಿಯಂ ಸ್ಫೋಟ ಬೆದರಿಕೆ – ಮುಂಬೈ ಪೊಲೀಸರಿಗೆ ಸಂದೇಶ
ಪ್ರತ್ಯಕ್ಷದರ್ಶಿ ಹೇಳುವಂತೆ ಪೇಪರ್‌ಗೆ ತೋಟದವರು ಬೆಂಕಿಯಿಟ್ಟಿದ್ದು, ಹಿಂದಿನಿಂದ ಬೆಂಕಿ ವ್ಯಾಪಿಸಿದೆ. ಇದೇ ಪಟಾಕಿ ಅಂಗಡಿ ದುರಂತಕ್ಕೆ ಕಾರಣವಾಗಿದೆ ಎಂದು ಹೇಳಿದ್ದಾರೆ. ಶನಿವಾರ ಮಧ್ಯಾಹ್ನ 3 ಗಂಟೆಗೆ ಸುಮಾರಿಗೆ ದುರಂತ ಸಂಭವಿಸಿದೆ. ಈ ಘಟನೆಯಿಂದಾಗಿ ಅತ್ತಿಬೆಲೆಯಿಂದ ಚಂದಾಪುರದವರೆಗೆ ಟ್ರಾಫಿಕ್ ಜಾಮ್ ಉಂಟಾಗಿತ್ತು.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]