ಹಾಸನ: ಫ್ಲೈವುಡ್ ಕಾರ್ಖಾನೆಗೆ ತಗುಲಿದ್ದ ಬೆಂಕಿ ನಂದಿಸಲು ಬಂದ ಅಗ್ನಿಶಾಮಕದಳದ ವಾಹನಕ್ಕೆ ಬೆಂಕಿ ತಗುಲಿ (Fire Accident) ಮೂವರು ಸಿಬ್ಬಂದಿ ಗಾಯಗೊಂಡ ಘಟನೆ ಹಾಸನದ (Hassan) ಹೊಳೆನರಸೀಪುರ ಪಟ್ಟಣದ (Holenarasipura) ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.
ಬೆಂಕಿ ನಂದಿಸಲು ಬಂದಿದ್ದ ಅಗ್ನಿಶಾಮಕದಳದ ಠಾಣಾಧಿಕಾರಿ ಸೋಮಶೇಖರ್, ಚಾಲಕ ಜನಾರ್ದನ್ ಹಾಗೂ ವಿಷ್ಣು ಎಂಬವರಿಗೆ ಸುಟ್ಟ ಗಾಯಗಳಾಗಿವೆ.
Advertisement
ನಗರದ ಹಮೀದ್ ಎಂಬವರಿಗೆ ಸೇರಿದ ಫ್ಲೈವುಡ್ ಫ್ಯಾಕ್ಟರಿಯಲ್ಲಿ ವಿದ್ಯುತ್ ಶಾರ್ಟ್‌ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡು, ಇಡೀ ಫ್ಲೈವುಡ್ ಪ್ಯಾಕ್ಟರಿಗೆ ವ್ಯಾಪಿಸಿದೆ. ಪರಿಣಾಮ ಮರದ ದಿಮ್ಮಿಗಳು, ಫ್ಲೈವುಡ್‍ಗಳು ಹೊತ್ತಿ ಉರಿದಿವೆ. ಸ್ಥಳಕ್ಕೆ ಅಗ್ನಿಶಾಮಕದಳದ ವಾಹನ ಹಾಗೂ ಮಿನಿ ವಾಹನದ ಮೂಲಕ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ನಡೆಸಿದ್ದಾರೆ. ಈ ವೇಳೆ ಮಿನಿ ವಾಹನಕ್ಕೂ ಬೆಂಕಿ ತಗುಲಿದೆ.
Advertisement
Advertisement
ಬೆಂಕಿ ಹತೋಟಿಗೆ ಬಾರದ ಹಿನ್ನೆಲೆ ಚನ್ನರಾಯಪಟ್ಟಣದಿಂದ ಮತ್ತೊಂದು ಅಗ್ನಿಶಾಮಕ ವಾಹನ ತರಿಸಿ ಸತತ ಎರಡು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ. ಲಕ್ಷಾಂತರ ರೂ. ಮೌಲ್ಯದ ಫ್ಲೈವುಡ್ ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ.
Advertisement
ಸ್ಥಳಕ್ಕೆ ಹೊಳೆನರಸೀಪುರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.