ವಿಜಯಪುರ: ತೆರದ ಬಾವಿಗೆ ಬಿದ್ದಿದ್ದ ಆಕಳನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಸುರಕ್ಷಿತವಾಗಿ ಹೊರ ತೆಗೆದ ಘಟನೆ ಜಿಲ್ಲೆಯ ಇಂಡಿ ತಾಲೂಕಿನ ಕನಕನಾಳ ಗ್ರಾಮದಲ್ಲಿ ನಡೆದಿದೆ.
ಕನಕನಾಳ ಗ್ರಾಮದ ತೊಟದ ವಸ್ತಿಯಲ್ಲಿ ಶುಕ್ರವಾರ ಈ ಘಟನೆ ಸಂಭವಿಸಿದೆ. ಗೆನಪ್ಪ ಭೀಮಣ್ಣ ಢಗೆ ಅವರಿಗೆ ಸೇರಿದ ಸುಮಾರು 60 ಸಾವಿರ ಮೌಲ್ಯದ ಜರ್ಸಿ ತಳಿಯ ಆಕಳು ಮೇವು ತಿನ್ನಲು ಹೋಗಿತ್ತು. ಈ ವೇಳೆ ಆಕಳು ತೆರೆದ ಬಾವಿಗೆ ಬಿದ್ದಿದೆ. ಬಾವಿಯಲ್ಲಿ ಬಿದ್ದ ಆಕಳಿಗೆ ಸಣ್ಣಪುಟ್ಟ ಗಾಯಗಳಾಗಿವೆ.
Advertisement
Advertisement
ಘಟನೆ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಅವರಾದ ಸೂರ್ಯಕಾಂತ ಬಿರಾದಾರ, ಸಹಾಯಕ ಠಾಣಾಧಿಕಾರಿಗಳ ತಂಡ ಸತತವಾಗಿ ಎರಡು ಗಂಟೆಗಳ ಕಾಲ ಹರಸಾಹಸ ಪಟ್ಟು ಆಕಳನ್ನು ರಕ್ಷಿಸಿದ್ದಾರೆ. ಅವರೊಂದಿಗೆ ಪ್ರಲ್ಹಾದ್ ಹರಿಜನ ಪುಲಸಿಂಗ, ಲಮಾಣಿ ಅಶೊಕ ರೂಗಿ, ಸಂತೋಷ ಬಗಲಿ, ಮಾರುತಿ ರಾಠೊಡ್ ಕೂಡ ಭಾಗಿಯಾಗಿದ್ದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv