ತಿರುವನಂತಪುರಂ: ಅಗ್ನಿ ಅವಘಡ ಸೇರಿದಂತೆ ಇನ್ನಿತರ ಕಾರ್ಯಾಚರಣೆಗಳ ಮೂಲಕ ಜನರ ಜೀವ ಉಳಿಸುವ ಅಗ್ನಿಶಾಮಕ ದಳದ ಸಿಬ್ಬಂದಿ (Firefighters), ಕೇರಳದ (Kerala) ಕಾಸರಗೋಡಿನ (Kasaragod) ವ್ಯಕ್ತಿಯೊಬ್ಬನ ಶಸ್ತ್ರಚಿಕಿತ್ಸೆಯಲ್ಲಿ ಪ್ರಮುಖ ಪಾತ್ರವಹಿಸಿ ಸೈ ಎನಿಸಿಕೊಂಡಿದ್ದಾರೆ.
ಹೌದು ಕೇರಳದಲ್ಲಿ ವ್ಯಕ್ತಿಯ ಮರ್ಮಾಂಗದಲ್ಲಿ ಸಿಲುಕಿದ ವಾಷರ್‌ನ್ನು ತೆಗೆಯಲು ಉತ್ತರ ಕೇರಳ ಜಿಲ್ಲೆಯ ಕನ್ಹಂಗಾಡ್‌ನಲ್ಲಿರುವ ಜಿಲ್ಲಾ ಆಸ್ಪತ್ರೆ ವೈದ್ಯರು ಅಗ್ನಿಶಾಮಕ ದಳದ ಸಹಾಯ ಕೋರಿದ್ದರು. ಅದರಂತೆ ಅಗ್ನಿಶಾಮಕ ಸಿಬ್ಬಂದಿಯ ಚಾಣಕ್ಷತನದಿಂದ ವ್ಯಕ್ತಿಯೊಬ್ಬನ ಜೀವ ಉಳಿದಂತಾಗಿದೆ. ಇದನ್ನೂ ಓದಿ: ನನ್ನ ಕೊಲೆಗೆ 70 ಲಕ್ಷ ಸುಪಾರಿ ಕೊಡಲಾಗಿದೆ – ತುಮಕೂರು ಎಸ್ಪಿಗೆ ಸಚಿವ ರಾಜಣ್ಣ ಪುತ್ರ ದೂರು
ಮೂರು ದಿನಗಳಿಂದ 46 ವರ್ಷದ ವ್ಯಕ್ತಿಯ ಜನನಾಂಗದ ಭಾಗದಲ್ಲಿ ಯಂತ್ರದ ವಾಷರ್ ಸಿಲುಕಿತ್ತು. ಇದರಿಂದ ವ್ಯಕ್ತಿಯ ಖಾಸಗಿ ಭಾಗದಲ್ಲಿ ತೀವ್ರ ಊತವಿತ್ತು. ಇದು ಮೂತ್ರ ವಿಸರ್ಜನೆಗೆ ತೊಡಕಾಗಿತ್ತು. ಈ ವಾಷರ್ ತೆಗೆಯಲು ವೈದ್ಯರು ಅಗ್ನಿಶಾಮಕ ಸಿಬ್ಬಂದಿಯ ಸಹಾಯ ಕೇಳಿದ್ದರು. ಅಗ್ನಿಶಾಮಕ ಸಿಬ್ಬಂದಿ ಬೆರಳುಗಳಲ್ಲಿ ಸಿಲುಕಿಕೊಂಡಿರುವ ಉಂಗುರಗಳನ್ನು ತೆಗೆಯಲು ಬಳಸುವ ಸಾಧನವಾದ ರಿಂಗ್ ಕಟ್ಟರ್ ಬಳಸಿ ವಾಷರ್‌ನ್ನು ಕತ್ತರಿಸಿ ತೆಗೆದಿದ್ದಾರೆ. ಇದು ಎರಡು ಗಂಟೆಗಳ ಕಾಲ ನಡೆದ ಪ್ರಕ್ರಿಯೆಯಾಗಿತ್ತು ಎಂದು ಕಾಞಂಗಾಡ್ ಠಾಣೆಯ ಅಗ್ನಿಶಾಮಕ ಮತ್ತು ರಕ್ಷಣಾ ಠಾಣಾಧಿಕಾರಿ ಪಿ ವಿ ಪವಿತ್ರನ್ ತಿಳಿಸಿದ್ದಾರೆ.
ಈ ಗಂಭೀರ ಪರಿಸ್ಥಿತಿಯನ್ನು ನಿಭಾಯಿಸಲು ಸಹಾಯವನ್ನು ಕೋರಿ ಮಾರ್ಚ್ 25 ರಂದು ರಾತ್ರಿ 10 ಗಂಟೆ ಸುಮಾರಿಗೆ ಜಿಲ್ಲಾ ಆಸ್ಪತ್ರೆಯ ವೈದ್ಯರಿಂದ ಕರೆ ಬಂದಿತ್ತು. ನಂತರ ಅಗ್ನಿಶಾಮಕ ಮತ್ತು ರಕ್ಷಣಾ ತಂಡದ ಐವರು ಸಿಬ್ಬಂದಿ ಆಸ್ಪತ್ರೆಗೆ ತೆರಳಿದ್ದರು. ಬಳಿಕ ವೈದ್ಯರು ಅನಸ್ತೇಷಿಯಾ ನೀಡಿದಾಗ ಕಬ್ಬಿಣದ ವಾಷರ್‌ನ್ನು ಕತ್ತರಿಸಲಾಯಿತು ಎಂದು ತಿಳಿಸಿದ್ದಾರೆ.
ಕುಡಿದ ಮತ್ತಿನಲ್ಲಿದ್ದಾಗ ಯಾರೋ ವಾಷರ್‌ನ್ನು ಹಾಗೆ ಹಾಕಿದ್ದಾರೆ ಎಂದು ವ್ಯಕ್ತಿ ವೈದ್ಯರ ಬಳಿ ಹೇಳಿಕೊಂಡಿದ್ದಾನೆ. ಇದನ್ನೂ ಓದಿ: ಪತ್ನಿ ತುಂಡರಿಸಿ ಸೂಟ್‍ಕೇಸ್‍ಗೆ ತುಂಬಿ, ಪುಣೆಯಲ್ಲಿ ವಿಷ ಸೇವಿಸಿದ್ದ ಹಂತಕ!