ಸಿಡ್ನಿ: ಕಾರಿನ ಎಂಜಿನ್‍ನಲ್ಲಿ, ಬೈಕ್‍ನಲ್ಲಿ, ಟಾಯ್ಲೆಟ್ ಕಮೋಡ್‍ನಲ್ಲಿ ಹಾವುಗಳು ಕಾಣಿಸಿಕೊಂಡ ಬಗ್ಗೆ ಈ ಹಿಂದೆ ಸುದ್ದಿಯಾಗಿದೆ. ಆದ್ರೆ ಇದೀಗ ಹಾವೊಂದು ಹೆಲ್ಮೆಟ್‍ನೊಳಗೆ ಪತ್ತೆಯಾಗಿದ್ದು, ಅಗ್ನಿಶಾಮಕ ಸಿಬ್ಬಂದಿಯನ್ನೇ ಬೆರಗಾಗಿಸಿದೆ.
Advertisement
ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್‍ನ ರುಧರ್‍ಫೋರ್ಡ್ ಫೈರ್ ಸ್ಟೆಷನ್‍ನ ಸಿಬ್ಬಂದಿಯೊಬ್ಬರು ತನ್ನ ಹೆಲ್ಮೆಟ್‍ನಲ್ಲಿ ವಿಷಕಾರಿ ಹಾವು ಇದ್ದಿದ್ದು ನೋಡಿದ್ದಾರೆ. ಹಾವನ್ನ ನೋಡಿದ ನಂತರ ಉರಗ ತಜ್ಞರನ್ನ ಕರೆಸಿ ತನ್ನ ಹೆಲ್ಮೆಟ್‍ನಿಂದ ಸುರಕ್ಷಿವಾಗಿ ಹಾವನ್ನ ಹೊರತೆಗೆಸಿದ್ದಾರೆ.
Advertisement
Advertisement
‘ಫೈರ್ ಅಂಡ್ ರೆಸ್ಕ್ಯೂNSW’ ಫೇಸ್‍ಬುಕ್ ಪೇಜಿನಲ್ಲಿ ಇದರ ವಿಡಿಯೋವನ್ನ ಹಂಚಿಕೊಳ್ಳಲಾಗಿದೆ. ಹೆಲ್ಮೆಟ್ ಸ್ಟ್ರಾಪ್ ಸುತ್ತ ಸುತ್ತಿಕೊಂಡಿದ್ದ ಹಾವನ್ನ ಉರಗ ರಕ್ಷಕರು ಹೊರತೆಗೆಯಲು ಪ್ರಯತ್ನಿಸುತ್ತಿರೋದನ್ನ ಕಾಣಬಹುದು.
Advertisement
ಉರಗ ತಜ್ಞ ಹಾವನ್ನ ಹಿಡಿದುಕೊಳ್ಳಲು ಯತ್ನಿಸಿದಾಗ ಅದು ನುಸುಳಿಕೊಂಡು ಹೋಗುತ್ತದೆ. ಆದ್ರೆ ಅವರು ತನ್ನ ಸಾಧನದ ಸಹಾಯದಿಂದ ಹಾವನ್ನ ಹಿಡಿದು ಬ್ಯಾಗ್‍ನೊಳಗೆ ಹಾಕಿಕೊಳ್ತಾರೆ.
ಈ ಹಾವು ವಿಷಕಾರಿಯಾದ ರೆಡ್ ಬೆಲ್ಲೀಡ್ ಹಾವು ಎಂದು ಗುರುತಿಸಲಾಗಿದೆ.
https://www.facebook.com/frnsw/videos/1820913657943203/