ಚಲಿಸುತ್ತಿದ್ದಂತೆ ಹೊತ್ತಿ ಉರಿದ ರೈಲು

Public TV
1 Min Read
fire train

ನವದೆಹಲಿ: ರೈಲು ಚಲಿಸುತ್ತಿದ್ದಂತೆ ಹೊತ್ತಿ ಉರಿದಿರುವ ಘಟನೆ ನಡೆದಿದೆ. ದೆಹಲಿಯಿಂದ ಛತ್ತೀಸ್‍ಗೆ ಹೋಗುತ್ತಿದ್ದ ರೈಲು ಬೆಂಕಿಗೆ ಅಹುತಿಯಾಗಿದೆ.

ದುರ್ಗ್-ಉಧಂಪುರ್  ರೈಲಿಗೆ ಬೆಂಕಿ ತಗುಲಿದ ದುರ್ಘಟನೆ ಇಂದು ಸಂಭವಿಸಿದೆ. ರಾಜಸ್ಥಾನ ಮತ್ತು ಮಧ್ಯಪ್ರದೇಶದ ಗಡಿಭಾಗದ ರೈಲುಮಾರ್ಗದಲ್ಲಿ ಈ ಅವಘಡ ಆಗಿದೆ. ರಾಜಸ್ಥಾನದ ಧೌಲಪುರ್ ಮತ್ತು ಮಧ್ಯಪ್ರದೇಶದ ಮೋರೇನಾ ನಡುವೆ ಹೇತಂಪುರ್ ರೈಲ್ವೆ ನಿಲ್ದಾಣದ ಸಮೀಪ ನಡೆದಿದೆ. ಇದನ್ನೂ ಓದಿ:  ರೈತರ ಹೋರಾಟಕ್ಕೆ ವರ್ಷ, ದುರಹಂಕಾರ, ದೌರ್ಜನ್ಯಕ್ಕೆ ಬಿಜೆಪಿ ಹೆಸರುವಾಸಿ: ಪ್ರಿಯಾಂಕಾ ವಾದ್ರಾ

20848 ಜಮ್ಮು ತಾವಿ ದುರ್ಗ್ ಎಕ್ಸ್ ಪ್ರೆಸ್ ಎಂದೂ ಕರೆಯಲಾಗುವ ಈ ರೈಲಿನ ನಾಲ್ಕು ಎಸಿ ಕೋಚ್ಗಳಿಗೆ ಬೆಂಕಿ ತಗುಲಿದೆ. ಎರಡು ಕೋಚ್‍ಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಇನ್ನೆರಡು ಕೋಚ್‍ಗಳಿಗೆ ವ್ಯಾಪಿಸಿದ್ದ ಬೆಂಕಿಯನ್ನ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಪ್ರಯತ್ನಿಸಿದ್ದಾರೆ. ಇದನ್ನೂ ಓದಿ:   ರೈತರ ಹೋರಾಟಕ್ಕೆ ಇಂದಿಗೆ ಒಂದು ವರ್ಷ – ಸಿಂಘು, ಟಿಕ್ರಿ ಗಡಿಯಲ್ಲಿ ಅನ್ನದಾತರ ಮಹಾಪಂಚಾಯತ್

fire train 1

ಮಧ್ಯಪ್ರದೇಶದ ಮೊರೇನಾ ಮತ್ತು ರಾಜಸ್ಥಾನದ ಧೋಲಪುರ್‍ನಿಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಕ್ಕೆ ತಕ್ಷಣವೇ ಆಗಮಿಸಿ ಕಾರ್ಯಾಚರಣೆಗೆ ಇಳಿದಿದ್ದರೆನ್ನಲಾಗಿದೆ. ಮೋರೇನಾದ ತಹಶೀಲ್ದಾರ್ ಅಜಯ್ ಶರ್ಮಾ ಪ್ರತಿಕ್ರಿಯಿಸಿದ್ದು, ಈ ಬೆಂಕಿ ಅವಘಡದಲ್ಲಿ ಯಾರಿಗೂ ಪ್ರಾಣಾಪಾಯ ಮತ್ತು ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ.

Share This Article
Leave a Comment

Leave a Reply

Your email address will not be published. Required fields are marked *