Connect with us

Dakshina Kannada

ಮಂಗ್ಳೂರಿನ ಕಿನ್ನಿಗೋಳಿಯಲ್ಲಿ ಸ್ಟುಡಿಯೋಗೆ ಬೆಂಕಿ- ಮಹಡಿ ಕುಸಿದು ಐವರಿಗೆ ಗಾಯ

Published

on

ಮಂಗಳೂರು: ಅಗ್ನಿ ಅವಘಡದಿಂದಾಗಿ ಮಂಗಳೂರಿನ ಕಿನ್ನಿಗೋಳಿ ಜಂಕ್ಷನ್ ನಲ್ಲಿದ್ದ ಸ್ಟುಡಿಯೋವೊಂದು ಸಂಪೂರ್ಣ ಬೆಂಕಿಗಾಹುತಿಯಾಗಿರೋ ಘಟನೆ ಕಳೆದ ತಡರಾತ್ರಿ ನಡೆದಿದೆ.

ಪ್ರತಿಮಾ ಹೆಸರಿನ ಸ್ಟುಡಿಯೋವೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಇದ್ದಕ್ಕಿದ್ದಂತೆಯೇ ಬೆಂಕಿಯ ಜ್ವಾಲೆ ಮೊದಲ ಮಹಡಿಗೂ ಪಸರಿಸಿ ಸ್ಟುಡಿಯೋದಲ್ಲಿದ್ದ ಎಲೆಕ್ಟ್ರಾನಿಕ್ಸ್ ಹಾಗೂ ಇನ್ನಿತರ ಪರಿಕರಗಳು ಸಂಪೂರ್ಣ ಸುಟ್ಟುಕರಕಲಾಗಿದೆ. ಸ್ಟುಡಿಯೋ ಸಮೀಪವಿರುವ ಬೇಕರಿಯೊಂದಕ್ಕೂ ಸ್ವಲ್ಪ ಪ್ರಮಾಣದ ಬೆಂಕಿ ತಗುಲಿದ್ದು, ಭಾಗಶಃ ಹಾನಿಯಾಗಿದೆ.

ಇದೇ ವೇಳೆ ಕಟ್ಟಡದಲ್ಲಿದ್ದ ಗ್ಯಾಸ್ ಸಿಲಿಂಡರ್‍ವೊಂದು ದೊಡ್ಡದಾದ ಶಬ್ದದೊಂದಿಗೆ ಸ್ಫೋಟಗೊಂಡಿದ್ದು ಬೆಂಕಿ ಹರಡಲು ಇನ್ನಷ್ಟು ಕಾರಣವಾಯಿತು. ಇದರಿಂದ ಅವಘಡ ಸಂಭವಿಸುತ್ತಿದ್ದಂತೆಯೇ ಬೆಂಕಿ ನಂದಿಸಲು ಹರಸಾಹಸಪಡುತ್ತಿದ್ದ ಸಾರ್ವಜನಿಕರು ಭಯಭೀತರಾದರು. ಸುಮಾರು ಒಂದು ಗಂಟೆಗಳ ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದರು. ಇನ್ನು ಬೆಂಕಿ ನಂದಿಸುವ ವೇಳೆ ಮೊದಲ ಮಹಡಿ ಕುಸಿದಿದ್ದು, ಪರಿಣಾಮ ಇಬ್ಬರು ಅಗ್ನಿಶಾಮಕ ದಳದ ಸಿಬ್ಬಂದಿ ಸಹಿತ ಐದು ಮಂದಿ ಗಾಯಗೊಂಡಿದ್ದಾರೆ.

ಸದ್ಯ ಗಾಯಾಳುಗಳಿಗೆ ಕಿನ್ನಿಗೋಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದ್ದು, ಮೂಲ್ಕಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

Click to comment

Leave a Reply

Your email address will not be published. Required fields are marked *