ಭೋಪಾಲ್: ಮಧ್ಯಪ್ರದೇಶದ ಜಬ್ಬಲ್‍ಪುರದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನಡೆಸಿದ ರೋಡ್ ಶೋ ವೇಳೆ ಆರತಿ ತಟ್ಟೆ ಬಲೂನ್ ಗೆ ಸಂಪರ್ಕ ಪಡೆದದ್ದರಿಂದ ಹೊತ್ತಿ ಉರಿದು ಕೆಲ ಕಾಲ ಅತಂಕ ಸೃಷ್ಟಿಸಿಯಾದ ಘಟನೆ ನಡೆಯಿತು.
ಮುಂಬರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅವರು ಪಕ್ಷದ ಪರ ಪ್ರಚಾರ ನಡೆಸಿದ್ದರು. ಈ ವೇಳೆ ರಾಹುಲ್ ಅವರಿಗೆ ಕಾರ್ಯಕರ್ತರು ಆರತಿ ಬೆಳಗಿದ್ದರು. ಆದರೆ ಅದೇ ಸಂದರ್ಭದಲ್ಲಿ ಪಕ್ಕದಲ್ಲೇ ಇದ್ದ ಬಲೂನ್ ಗಳ ಗುಚ್ಚಕ್ಕೆ ಆರತಿಯ ಬೆಂಕಿ ತಾಗಿದ ಕಾರಣದಿಂದ ಎತ್ತರಕ್ಕೆ ಬೆಂಕಿಯ ಜ್ವಾಲೆ ಸೃಷ್ಟಿಯಾಯಿತು.
Advertisement
Advertisement
ಕೆಲವೇ ಸೆಕೆಂಡ್ ಗಳ ಕಾಲ ಬೆಂಕಿ ಹೊತ್ತಿ ಉರಿದರೂ ಸ್ಥಳದಲ್ಲಿದ್ದ ಕಾರ್ಯಕರ್ತರು ಅಲ್ಲಿಂದ ಓಟಕಿತ್ತಿದ್ದರು. ಆದರೆ ಈ ವೇಳೆ ಯಾರಿಗೂ ಅಪಾಯ ಸಂಭವಿಸಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿದೆ.
Advertisement
ಈ ವೇಳೆ ರಾಹುಲ್ ಗಾಂಧಿ, ಕಮಲ್ ನಾಥ್, ಮತ್ತು ಜೋತಿರಾದಿತ್ಯ ಸಿಂದ್ಯಾ ಅವರು ಪಕ್ಕದಲ್ಲೇ ತೆರೆದ ಜೀಪ್ ನಲ್ಲಿ ತೆರಳುತ್ತಿದ್ದರು. ಈ ಕುರಿತು ಸ್ಪಷ್ಟನೆ ನೀಡಿರುವ ಎಸ್‍ಪಿ ಅಮಿತ್ ಸಿಂಗ್ ರಕ್ಷಣಾ ವ್ಯವಸ್ಥೆಯ ಲೋಪವಾಗಿಲ್ಲ. ಜನರನ್ನು ಕನಿಷ್ಠ 15 ಮೀಟರ್ ದೂರದಲ್ಲೇ ತಡೆದು ನಿಲ್ಲಿಸಲಾಗಿತ್ತು. ಮುಂದಿನ ಹಂತದಲ್ಲಿ ಇಂತಹ ಘಟನೆ ನಡೆಯದಂತೆ ಬಲೂನ್ ಹಾಗೂ ಆರತಿ ಮಾಡುವುದನ್ನು ಕೂಡ ದೂರ ಮಾಡಲಾಯಿತು ಎಂದು ತಿಳಿಸಿದ್ದಾರೆ. ಇದನ್ನು ಓದಿ: ದೂರದಿಂದ್ಲೇ ಗುರಿಯಿಟ್ಟು ರಾಹುಲ್ ಕೊರಳಿಗೆ ಹಾರ ಎಸೆದ ಅಭಿಮಾನಿ- ವಿಡಿಯೋ ಫುಲ್ ವೈರಲ್
Advertisement
ಈ ಹಿಂದೆ ರಾಹುಲ್ ಗಾಂಧಿ ಕರ್ನಾಟಕ ವಿಧಾನಸಭೆಯ ಪ್ರಚಾರಕ್ಕೆ ಆಗಮಿಸಿದ್ದ ವೇಳೆ ಅವರು ಪ್ರಯಾಣಿಸುತ್ತಿದ್ದ ವಿಮಾನ ಹುಬ್ಬಳ್ಳಿ ನಿಲ್ದಾಣದಲ್ಲಿ ಲ್ಯಾಡಿಂಗ್ ಆಗುವ ಮುನ್ನ ತಾಂತ್ರೀಕ ಸಮಸ್ಯೆ ಕಾಣಿಸಿಕೊಂಡಿತ್ತು. ಇದರಿಂದ ಬಾನಂಗಳದಲ್ಲೇ ಕೆಲಕಾಲ ಆತಂಕದ ಪರಿಸ್ಥಿತಿ ಎದುರಿಸಿದ್ದರು. ಈ ಘಟನೆಯ ಕುರಿತು ಸರಿಯಾದ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿತ್ತು. ಇದನ್ನು ಓದಿ: ರಾಹುಲ್ ಗಾಂಧಿ ಪ್ರಯಾಣಿಸುತ್ತಿದ್ದ ವಿಮಾನ ಹುಬ್ಬಳ್ಳಿಗೆ ಬಂದಾಗ ನಿಜವಾಗಿಯೂ ಆಗಿದ್ದೇನು?
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv