ಮುಂಬೈ: ಟಾರ್ಡಿಯೊದಲ್ಲಿನ ನಾನಾ ಚೌಕ್‍ನಲ್ಲಿನ 20 ಅಂತಸ್ತಿನ ಕಟ್ಟಡಕ್ಕೆ ಬೆಂಕಿ ಬಿದ್ದು ಧಗ ಧಗ ಹೊತ್ತಿ ಉರಿದಿರುವ ಘಟನೆ ನಡೆದಿದೆ.
ಕಮಲಾ ಬಿಲ್ಡಿಂಗ್‍ನಲ್ಲಿ ಇಂದು ಬೆಳಗ್ಗೆ ಅಗ್ನಿ ಅವಘಡ ಸಂಭವಿಸಿದೆ. 20 ಅಂತಸ್ತಿನ ಕಟ್ಟಡದ 18ನೇ ಮಹಡಿಯಲ್ಲಿ 3ನೇ ಹಂತದ ಬೆಂಕಿ ಅವಘಡ ಸಂಭವಿಸಿದೆ. ಪ್ರಸ್ತುತ ಲಭ್ಯವಾಗಿರುವ ಮಾಹಿತಿ ಪ್ರಕಾರ ಗಾಯಾಳುಗಳಲ್ಲಿ 7 ಮಂದಿ ಮೃತಪಟ್ಟಿದ್ದಾರೆ ಎಂದು ನಾಯರ್ ಆಸ್ಪತ್ರೆಯ ವೈದ್ಯರು ಘೋಷಿಸಿದ್ದಾರೆ. ಗಾಯಗೊಂಡ ಇತರ ಮೂವರನ್ನು ತೀವ್ರ ನಿಗಾ ಘಟಕಕ್ಕೆ (ಐಸಿಯು) ದಾಖಲಿಸಲಾಗಿದ್ದು, 12 ಮಂದಿ ಭಾಟಿಯಾ ಆಸ್ಪತ್ರೆಯ ಸಾಮಾನ್ಯ ವಾರ್ಡ್‍ನಲ್ಲಿದ್ದಾರೆ. ಇದನ್ನೂ ಓದಿ: ಕೋವಿನ್ ಖಾಸಗಿ ಮಾಹಿತಿ ಸೋರಿಕೆ ಆಗಿಲ್ಲ: ಕೇಂದ್ರ
Advertisement
Maharashtra | A level 3 fire broke out in 20 storeys Kamala building near Mumbai’s Bhatia hospital in Tardeo. 13 fire engines are present at the spot; more details awaited.
— ANI (@ANI) January 22, 2022
Advertisement
ಅಗ್ನಿಶಾಮದಳ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಿಸುತ್ತಿದ್ದಾರೆ. 13 ಅಗ್ನಿಶಾಮಕ ವಾಹನಗಳು, ಏಳು ಜಂಬೋ ಟ್ಯಾಂಕರ್‌ಗಳು ಬೆಂಕಿ ನಂದಿಸುವ ಕಾರ್ಯ ಮಾಡುತ್ತಿವೆ. ಗಾಯಾಳುಗಳನ್ನು ಸಮೀಪದ ಭಾಟಿಯಾ ಮತ್ತು ನಾಯರ್ ಆಸ್ಪತ್ರೆಗಳಿಗೆ ರವಾನಿಸಲಾಗಿದೆ. ಪ್ರಸ್ತುತ ಘಟನಾ ಸ್ಥಳದಲ್ಲಿ 5 ಆಂಬುಲೆನ್ಸ್ ಸೇವೆ ಒದಗಿಸಲಾಗಿದೆ. ಇದನ್ನೂ ಓದಿ: ಜಾತಿ, ಧರ್ಮ, ದೇಶ ಗಡಿ ದಾಟಿದ ಪ್ರೇಮ ಕಥೆ
Advertisement
Advertisement