ಮುಂಬೈ: ಭಾರತದಲ್ಲಿ ಮದುವೆ ಸಮಾರಂಭಗಳಲ್ಲಿ ಭೋಜನ ಬಹು ಮುಖ್ಯ ಪಾತ್ರ ವಹಿಸುತ್ತದೆ. ಅತಿಥಿಗಳು ಮದುವೆ ಸಮಾರಂಭವನ್ನು ಆನಂದಿಸದಿದ್ದರೂ ಊಟವನ್ನು ಮಾತ್ರ ಒಲ್ಲೆಎನ್ನುವವರು ನಮ್ಮಲ್ಲಿ ಅತೀ ವಿರಳ. ಆದರೆ ಮದುವೆ ಸಮಾರಂಭವೊಂದರಲ್ಲಿ ಹಾಲ್‍ಗೆ ಬೆಂಕಿ ತಗುಲಿ ಹೊತ್ತಿ ಉರಿದರೂ ಅತಿಥಿಗಳು ವಿಚಲಿತರಾಗದೇ ಊಟವನ್ನು ಸವಿದಿದ್ದಾರೆ.
ಮದುವೆಯೊಂದರಲ್ಲಿ ಊಟವನ್ನು ಸವಿಯುತ್ತಿದ್ದ ವ್ಯಕ್ತಿ ಅಗ್ನಿ ದುರಂತವನ್ನು ಕಂಡರೂ ಏನೂ ಆಗಿಲ್ಲದಂತೆ ವರ್ತಿಸಿ ಮತ್ತೆ ತನ್ನ ಊಟದ ಕಡೆ ಗಮನವನ್ನು ಹರಿಸಿದ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ. ಅವನ ಹಿಂದುಗಡೆ ಒಂದು ದೊಡ್ಡ ಅಗ್ನಿ ದುರಂತವನ್ನು ಗುರುತಿಸಿದ್ದರೂ ಊಟವನ್ನು ಬಿಟ್ಟು ಆ ಕಡೆ ಗಮನ ಕೊಡಲೂ ಸಾಧ್ಯವಾಗದಷ್ಟು ಮಗ್ನತೆ ತೋರಿದ್ದಾನೆ. ಇದನ್ನೂ ಓದಿ: 62 ನಿವಾಸಿಗಳಿಗೆ ಕೋವಿಡ್ ಪಾಸಿಟಿವ್ – ಕಂಟೈನ್ಮೆಂಟ್ ಝೋನ್ ಆಯ್ತು ವೃದ್ಧಾಶ್ರಮ
Advertisement
Advertisement
ಈ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿನ ಅನ್ಸಾರಿ ಮ್ಯಾರೇಜ್ ಹಾಲ್ ನಲ್ಲಿ ನಡೆದಿದೆ. ಈ ವಿಡಿಯೋವನ್ನು ಇಂಡಿಯನ್ ಫೈರ್ ಸರ್ವಿಸ್ ಎಂಬ ಫೇಸ್‍ಬುಕ್ ಪುಟ ಹಂಚಿಕೊಂಡಿದೆ.
Advertisement
ನವೆಂಬರ್ 28 ರಂದು ಈ ಘಟನೆ ನಡೆದಿದ್ದು, ಬೆಂಕಿ ಮದುವೆ ಮಂಟಪದ ಸ್ಟೋರ್ ರೂಮ್ ನಿಂದ ಕಾಣಿಸಿಕೊಂಡಿತ್ತು. ಸಮಾರಂಭದಲ್ಲಿ ಬಳಸಿದ ಪಟಾಕಿಯೇ ಬೆಂಕಿಗೆ ಕಾರಣವಾಗಿದೆ ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಮೂರು ಅಗ್ನಿಶಾಮಕ ವಾಹನಗಳು ಆಗಮಿಸಿತ್ತು. ಬೆಂಕಿಯಿಂದ ಆರು ದ್ವಿಚಕ್ರ ವಾಹನಗಳು, ಕೆಲವು ಕುರ್ಚಿಗಳು ಮತ್ತು ಅಲಂಕಾರಗಳಿಗೆ ಹಾನಿಯಾಗಿದ್ದು, ಅದೃಷ್ಟವಶಾತ್ ಯಾರಿಗೂ ಗಾಯಗಳಾಗಿಲ್ಲ ಎಂಬುದು ವರದಿಯಾಗಿದೆ.