ರಾಯಚೂರು: ಚಲಿಸುತ್ತಿದ್ದ ಟ್ರಕ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿರುವ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕಪಗಲ್ ಬಳಿ ನಡೆದಿದೆ.ಇದನ್ನೂ ಓದಿ: Chikkaballapura | ಗಂಡ-ಹೆಂಡ್ತಿ ನಡುವೆ ಜಗಳ – ಮಲಗಿದ್ದಾಗ ಪತಿಯನ್ನೇ ಕೊಂದಳಾ ಪತ್ನಿ?
Advertisement
ಟ್ರಕ್ ಇಂಜಿನ್‌ನಲ್ಲಿ ಬಿಸಿ ಹೆಚ್ಚಾಗಿದ್ದು ಅತಿಯಾದ ಶಾಖದಿಂದ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ಕಾಣಿಸಿಕೊಂಡಿದ್ದೆ ಟ್ರಕ್ ಬಿಟ್ಟು ಚಾಲಕ ಮತ್ತು ಕ್ಲೀನರ್ ಕೆಳಗಡೆ ಇಳಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಂಕಿಯ ಕೆನ್ನಾಲಿಗೆಗೆ ಟ್ರಕ್‌ನ ಮುಂಭಾಗ ಸುಟ್ಟು ಕರಕಲಾಗಿದೆ.
Advertisement
ಕೂಡಲೇ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು, ಬೆಂಕಿ ನಂದಿಸಿದ್ದಾರೆ. ಹೀಗಾಗಿ ಟ್ರಕ್‌ನ ಇಂಜಿನ್ ಮುಂಭಾಗ ಮಾತ್ರ ಸುಟ್ಟು ಕರಕಲಾಗಿದ್ದು, ಹಿಂಭಾಗದಲ್ಲಿದ್ದ ಗೂಡ್ಸ್ ಉಳಿದುಕೊಂಡಿದೆ. ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.ಇದನ್ನೂ ಓದಿ: ಕಗ್ಗಲೀಪುರದಲ್ಲಿ ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣ ನಿರ್ಮಾಣ?
Advertisement
Advertisement