ಮೊಬೈಲ್ ಶೋ ರೂಂ ನಲ್ಲಿ ಬೆಂಕಿ-ಡೆಮೋ ಸೇರಿದಂತೆ ಕೆಲ ಮೊಬೈಲ್‍ಗಳು ಭಸ್ಮ

Public TV
0 Min Read
fire yalanka

ಬೆಂಗಳೂರು: ನಗರದ ಯಲಹಂಕ ಬಳಿ ಪೈ ಇಂಟರ್ ನ್ಯಾಷನಲ್‍ನ ಕೆಳ ಮಹಡಿಯಲ್ಲಿರುವ ಮೊಬೈಲ್ ಶೋ ರೂಂನಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಅವಘಡದಿಂದಾಗಿ ಮೊಬೈಲ್ ಶೋ ರೂಂ ನಲ್ಲಿದ್ದ ಡೆಮೋ ಮೊಬೈಲ್‍ಗಳು ಸೇರಿದಂತೆ ಕೆಲ ಮೊಬೈಲ್‍ಗಳು ಬೆಂಕಿಗಾಹುತಿಯಾಗಿವೆ. ಶಾರ್ಟ್ ಸರ್ಕ್ಯೂಟ್‍ನಿಂದಾಗಿ ಬೆಂಕಿ ಕಾಣಿಸಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

WhatsApp Image 2018 09 02 at 7.24.28 AM

ಗಸ್ತಿನಲ್ಲಿದ್ದ ಪೊಲೀಸರು ದೃಶ್ಯ ನೋಡಿ ತಕ್ಷಣವೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.

ಯಲಹಂಕ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *