ನವದೆಹಲಿ: ಭುವನೇಶ್ವರ ಬೌಂಡ್ ರಾಜಧಾನಿ ಎಕ್ಸ್‌ಪ್ರೆಸ್‌ನಲ್ಲಿ ಇಂದು ಮಧ್ಯಾಹ್ನ 1 ಗಂಟೆ ಸಮಯದಲ್ಲಿ ಬೆಂಕಿ ಕಾಣಿಸಿಕೊಂಡು ಒಂದು ಬೋಗಿ ಸಂಪೂರ್ಣ ಸುಟ್ಟು ಕರಕಲಾಗಿದೆ.
ಎಂದಿನಂತೆ ರಾಜಧಾನಿ ಎಕ್ಸ್‌ಪ್ರೆಸ್ ನವದೆಹಲಿಯಿಂದ ಭುವನೇಶ್ವರ್ ನತ್ತ ಪ್ರಯಾಣ ಬೆಳೆಸಿತ್ತು. ಈ ವೇಳೆ ಮಾರ್ಗ ಮಧ್ಯೆ ಒಡಿಶಾದ ಬಾಲಸೋರ್ ಮತ್ತು ಸೊರೊ ನಿಲ್ದಾಣಗಳ ನಡುವೆ ರೈಲಿಗೆ ವಿದ್ಯುತ್ ಪೂರೈಕೆ ಮಾಡುವ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಆ ಬೋಗಿಯನ್ನು ಅಧಿಕಾರಿಗಳು ರೈಲಿನಿಂದ ಬೇರೆ ಮಾಡಿದ ಕಾರಣ ಉಳಿದ ಯಾವ ಬೋಗಿಗೂ ಬೆಂಕಿ ತಗುಲಿಲ್ಲ. ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Advertisement
Fire broke out in the power car of New Delhi-Bhubaneswar Rajdhani Express near Khantapada, Odisha. The fire has been brought under control and no casualties or injuries have been reported. As safety measure generator car has been detached. pic.twitter.com/stMB9yz5uf
— ANI (@ANI) May 11, 2019
Advertisement
ಖರಗಪುರದ ಆಗ್ನೇಯ ರೈಲ್ವೆ ವಿಭಾಗದ ಖಂತಪಾಡ ಎಂಬ ಊರಿನಲ್ಲಿ ಈ ಘಟನೆ ನಡೆದಿದೆ. ಈ ರೈಲಿನಲ್ಲಿ ಕೇವಲ ಒಂದು ವಿದ್ಯುತ್ ಪೂರೈಕೆ ಮಾಡುವ ಘಟಕ ಮಾತ್ರ ಇದ್ದು ಆ ಬೋಗಿಯಲ್ಲೇ ಬೆಂಕಿ ಕಾಣಿಸಿಕೊಂಡಿದೆ. ಸುರಕ್ಷತೆಯ ಕ್ರಮವಾಗಿ ವಿದ್ಯುತ್ ಘಟಕದಿಂದ ರೈಲಿಗೆ ನೀಡಲಾದ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿದೆ.
Advertisement
ಈ ಘಟನೆ ತಿಳಿದು ತಕ್ಷಣ ಸ್ಥಳಕ್ಕೆ ಬಂದ ಮೂರು ಅಗ್ನಿಶಾಮಕ ದಳದ ವಾಹನಗಳು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದೆ. ರೈಲು ಬೇರೆ ಜನರೇಟರ್ ಘಟಕದ ಸಹಾಯದಿಂದ 2:59 ಕ್ಕೆ ಖಂತಪಾಡದಿಂದ ಎಲ್ಲಾ ಪ್ರಯಾಣಿಕರೊಂದಿಗೆ ಭುವನೇಶ್ವರ್‍ನತ್ತ ಹೊರಟಿದೆ.