ಗಾಂಧಿನಗರ: ಬೆಂಕಿ ಹೇರ್‌ಕಟ್ಟಿಂಗ್ (Fire Haircut) ಮಾಡಿಸಿಕೊಳ್ಳಲು ಹೋಗಿ ನಿಜವಾಗಿಯೂ ಬೆಂಕಿ ಹೊತ್ತಿಕೊಂಡು, 18 ವರ್ಷದ ಹುಡುಗನೊಬ್ಬ ತಲೆ ಸುಟ್ಟುಕೊಂಡು ಆಸ್ಪತ್ರೆ (Hospital) ಸೇರಿರುವ ಘಟನೆ ಗುಜರಾತಿನ ವಲ್ಸಾದ್ ಜಿಲ್ಲೆಯ ವಾಪಿ ಪಟ್ಟಣದ ಸಲೂನ್‌ನಲ್ಲಿ ನಡೆದಿದೆ.
ಬೆಂಕಿ ಕಟ್ಟಿಂಗ್ ಅಂದ್ರೆ ಕ್ಷೌರಿಕ ಅಥವಾ ಕೇಶ ವಿನ್ಯಾಸಕರು ಗ್ರಾಹಕನ ತಲೆಕೂದಲಿನ ಮೇಲೆ ಬೆಂಕಿಯನ್ನು ಬಳಸಿ ಅದನ್ನು ಒಂದು ಶೈಲಿಗೆ ಹೊಂದಿಸುವ ಪ್ರಕ್ರಿಯೆಯಾಗಿದೆ. ಇದನ್ನೂ ಓದಿ: JDS ಅಧಿಕಾರಕ್ಕೆ ಬಂದ್ರೆ ಉಚಿತ ಶಿಕ್ಷಣ, ಉದ್ಯೋಗ, ಕುಟುಂಬಕ್ಕೊಂದು ಮನೆ- HDK ಆಶ್ವಾಸನೆ
Advertisement
Advertisement
ಈ ಕಟ್ಟಿಂಗ್ ಮಾಡುವಾಗ 18 ವರ್ಷದ ಯುವಕನ ತಲೆಗೆ ನಿಜವಾಗಿಯೂ ಬೆಂಕಿ (Fire) ತಗುಲಿದೆ. ಬಳಿಕ ವ್ಯಕ್ತಿಯ ಕುತ್ತಿಗೆ, ಎದೆಯ ಭಾಗಕ್ಕೆ ತೀವ್ರವಾಗಿ ಬೆಂಕಿ ಹೊತ್ತಿಕೊಂಡಿದ್ದು, ಸುಟ್ಟ ಗಾಯಗಳಾಗಿವೆ. ತಕ್ಷಣ ಯುವಕನನ್ನು ವಲ್ಸಾದ ಸರ್ಕಾರಿ ಆಸ್ಪತ್ರೆಗೆ (Government Hospital) ದಾಖಲಿಸಲಾಯಿತು. ಹೆಚ್ಚುವರಿ ಚಿಕಿತ್ಸೆಗಾಗಿ ಅಲ್ಲಿಂದ ಅವರನ್ನು ಸೂರತ್‌ನ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ವಾಪಿ ಪಟ್ಟಣದ ಪೊಲೀಸ್ (Police) ಅಧಿಕಾರಿ ತಿಳಿಸಿದ್ದಾರೆ. ಇದನ್ನೂ ಓದಿ: ವಿಧಾನಸಭೆ ಚುನಾವಣೆ – ನವೆಂಬರ್ ಅಂತ್ಯಕ್ಕೆ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ?
Advertisement
Advertisement
ಮಾಹಿತಿ ಪ್ರಕಾರ, ಬೆಂಕಿ ಕ್ಷೌರಕ್ಕಾಗಿ ತಲೆಯ ಮೇಲೆ ಕೆಲವು ರೀತಿಯ ರಾಸಾಯನಿಗಳನ್ನು (chemical) ಸಿಂಪಡಿಸಿದ್ದ, ಹಾಗಾಗಿ ತಲೆಗೆ ಬೆಂಕಿ ಹೊತ್ತಿಸಿದ ತಕ್ಷಣ ಅದು ಕುತ್ತಿಗೆ ಹಾಗೂ ಎದೆಯ ಭಾಗಕ್ಕೂ ವ್ಯಾಪಿಸಿದೆ.
ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವ ಪೊಲೀಸರು, ಬೆಂಕಿ ಕ್ಷೌರಕ್ಕೆ ಯಾವ ರಾಸಾಯನಿಕ ಬಳಸಲಾಗಿದೆ ಎಂಬುದನ್ನು ಕಂಡುಹಿಡಿಯಲು ತನಿಖೆ ನಡೆಸುತ್ತಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.