ಮುಂಬೈ: ನಗರದ ಕಮಲಾ ಮಿಲ್ ಕಾಂಪೌಂಡ್‌ನ (Kamala Mill Compound) ಲೋವರ್ ಪರೇಲ್‌ನಲ್ಲಿ (Lower Parel) ಇಂದು ಬೆಳಗ್ಗೆ ಬೆಂಕಿ ಕಾಣಿಸಿಕೊಂಡು ಅವಘಡ ಉಂಟಾಗಿದೆ.
ಏಳು ಅಂತಸ್ತಿನ ಕಟ್ಟಡ ಟೈಮ್ಸ್ ಟವರ್‌ನಲ್ಲಿ (Times Tower) ಬೆಂಕಿ ಕಾಣಿಸಿಕೊಂಡಿದ್ದು, ಭಾರೀ ಅಗ್ನಿ ಅವಘಡ ಸಂಭವಿಸಿದೆ ಎಂದು ಬೃಹತ್ ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳು (BMC) ತಿಳಿಸಿದ್ದಾರೆ. ಜೊತೆಗೆ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಇಂಡಸ್ಟ್ರಿಗೆ ದರ್ಶನ್ ಕಾಂಟ್ರುಬ್ಯುಷನ್ ತುಂಬಾ ಇದೆ: ನಟ ಪ್ರೇಮ್
ತಕ್ಷಣವೇ ಸ್ಥಳಕ್ಕೆ ಒಂಬತ್ತು ಅಗ್ನಿಶಾಮಕ ವಾಹನಗಳು ದೌಡಾಯಿಸಿದ್ದು, ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿವೆ.
#WATCH | Maharashtra | Efforts are underway to douse the fire that broke out in Times Tower building located in Lower Parel West, Mumbai. No injuries reported. pic.twitter.com/1rAyssPTFv
— ANI (@ANI) September 6, 2024
14 ಅಂತಸ್ತನ್ನು ಹೊಂದಿರುವ ಕಟ್ಟಡದಲ್ಲಿ 3 ರಿಂದ 7 ಮಹಡಿಯವರೆಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಇದನ್ನೂ ಓದಿ: Kolkata Horror | ಆರ್.ಜಿ ಕರ್ ಕಾಲೇಜಿನ ಮಾಜಿ ಪ್ರಾಂಶುಪಾಲನ ಮನೆ ಸೇರಿ 7 ಕಡೆ ಇಡಿ ದಾಳಿ!
2017ರ ಡಿ.29ರಂದು ಕಮಲಾ ಮಿಲ್ ಕಾಂಪೌಂಡ್‌ನ ರೆಸ್ಟೋರೆಂಟ್‌ಗೆ ಮಧ್ಯರಾತ್ರಿ 12:30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿತ್ತು. ಆ ವೇಳೆ 14 ಜನ ಸಾವನ್ನಪ್ಪಿದ್ದು, ಕೆಲವರು ಗಾಯಗೊಂಡಿದ್ದರು.