ಮೈಸೂರು: ಬೆಲವತ್ತದಲ್ಲಿ ಕುದಿಯುವ ಭೂಮಿಯಿಂದ ಬಾಲಕ ಮೃತಪಟ್ಟ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಭೂ ವಿಜ್ಞಾನಿಗಳದೀ ಬಗ್ಗೆ ಮಾಹಿತಿ ನೀಡಿದ್ದಾರೆ. ಘಟನೆಗೆ ಕಾರಣ ಏನಿರಬಹುದು ಎಂಬುದನ್ನ ತಿಳಿಸಿದ್ದಾರೆ.
ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಭೂ ವಿಜ್ಞಾನಿ ಟಿ.ಆರ್ ಅನಂತರಾಮು, ಮೇಲ್ನೋಟಕ್ಕೆ ಏನೂ ಕಾಣ್ತಾ ಇಲ್ಲ. ಒಂದು ಕಡ್ಡಿಯಲ್ಲಿ ಮಣ್ಣನ್ನ ಕೆಡವಿದಾಗ ಒಳಗಡೆಯಿಂದ ಶಾಖ ಬರುತ್ತೆ. ಹಾಗೆಯೇ ಒಳಗಡೆಯಿಂದ ಗಾಳಿ ಮೇಲಕ್ಕೆ ಉಕ್ಕಿದಂತೆ ಕಂಡುಬರುತ್ತೆ. ಅದನ್ನ ಮುಟ್ಟಿ ನೋಡಿದಾಗ ಉಷ್ಣಾಂಶ ಜಾಸ್ತಿ ಇರೋದು ಕಂಡುಬರುತ್ತೆ ಅಂತಾ ವಿವರಿಸಿದ್ರು.
Advertisement
Advertisement
ಮಣ್ಣಿನ ಪಿಹೆಚ್ ಮಟ್ಟ (ಆಮ್ಲತೆ ಮತ್ತು ಅಸಿಡಿಟಿ) ಪರೀಕ್ಷೆ ನಡೆಸಿದಾಗ ಅದು ನ್ಯೂಟ್ರಲ್ ಆಗಿದೆ. ಹಾಗಾಗಿಯೇ ಘಟನೆಯ ಬಗ್ಗೆ ಕಣ್ಣಿಂದ ನೋಡಿ ಹೇಳಲು ಸಾಧ್ಯವಿಲ್ಲ. ಈ ಬಗ್ಗೆ ಲ್ಯಾಬೋರೇಟರಿಗಳಲ್ಲಿ ವಿಶ್ಲೇಷಣೆ ಮಾಡಬೇಕಾಗುತ್ತದೆ. ಅದಕ್ಕೆ ತಜ್ಞರು ಈ ಜಾಗಕ್ಕೆ ಭೇಟಿ ಕೊಟ್ಟು ಮಣ್ಣಿನ ಸ್ಯಾಂಪಲ್ ಪರೀಕ್ಷೆ ಮಾಡಿ ಘಟನೆಗೆ ಯಾರು ಕಾರಣಕರ್ತರು ಹಾಗೂ ಮುಂದೆ ಈ ಕಸವನ್ನು ಪರಿಸರಕ್ಕೆ ತೊಂದರೆಯಾಗದಂತೆ ಯಾವ ರೀತಿ ವಿಲೇವಾರಿ ಮಾಡಬಹುದು ಎಂಬುವುದರ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ ಅಂದ್ರು.
Advertisement
ರಾಸಾಯನಿಕದಿಂದ ಈ ಘಟನೆ ನಡೆದಿದೆಯಾ? ಎಂಬ ವರದಿಗಾರನ ಪ್ರಶ್ನೆಗೆ ಉತ್ತರಿಸಿದ ಅವರು, ರಾಸಾಯನಿಕ ಎಂದು ಹೇಳಲು ಬರುವುದಿಲ್ಲ. ರಾಸಾಯನಿಕೆ ಅಂದ್ರೆ ಲಿಕ್ವಿಡ್ ಅಂತೀವಿ. ಆದ್ರೆ ಇದು ಪೌಡರ್ ತರ ಇದೆ. ಒಳಗಡೆ ಬೆಂಕಿ ಇಲ್ಲ. ಆದ್ರೆ ಉಷ್ಣಾಂಶಕ್ಕೆ ಬೆಂಕಿ ಹೊತ್ತಿಕೊಂಡಂತೆ ಆಗುತ್ತದೆ. ಒಳಗಡೆ ಉಷ್ಣಾಂಶ ಇದ್ದು ಅದನ್ನ ಕೆದಕಿದಾಗ ಮೇಲಿನ ಗಾಳಿಯಿಂದ ಬೆಂಕಿ ಹೊತ್ತಿಕೊಂಡಂತೆ ಆಗುತ್ತದೆ. ಎರಡು ವರ್ಷಗಳ ಹಿಂದೆ ಕಲಬುರಗಿಯಲ್ಲಿ ಅಪಾಯಕಾರಿ ತ್ಯಾಜ್ಯವನ್ನು ಸರಿಯಾಗಿ ವಿಲೇವಾರಿ ಮಾಡಿಲ್ಲ ಅನ್ನೋ ದೂರು ಬಂದಿತ್ತು. ಆಗ ಮಂಡಳಿ ತಕ್ಷಣ ದೂರು ಸ್ವೀಕರಿಸಿ ಕ್ರಮ ಕೈಗೊಂಡಿತ್ತು ಅಂದ್ರು.
Advertisement
ಮುಂದಿನ ಕ್ರಮವೇನು?: ಘಟನೆಯ ಬಗ್ಗೆ ತನಿಖೆ ಮಾಡಿ ಬಳಿಕ ಕಾರಣಕರ್ತರಾದವರ ಮೇಲೆ ಕಾನೂನು ಪ್ರಕಾರ ಕ್ರಿಮಿನಲ್ ಕೇಸ್ ದಾಖಲು ಮಾಡಲು ನಮಗೆ ಅವಕಾಶವಿದೆ. ಇನ್ನು ಈ ಜಾಗದಲ್ಲಿ ಇನ್ನು ಮುಂದಕ್ಕೆ ಯಾವುದೇ ತೊಂದರೆಯಾಗದಂತೆ ಕ್ರಮ ಜರುಗಿಸಬೇಕು. ಅಥವಾ ವೈಜ್ಞಾನಿಕವಾಗಿ ಜಾಗದಲ್ಲಿ ತೊಂದರೆಯಾಗದಂತೆ ಹೇಗೆ ಕ್ರಮ ಕೈಗೊಳ್ಳಬೇಕೆಂದು ಮಂಡಳಿ ನಿರ್ಧಾರ ಮಾಡುತ್ತದೆ ಅಂತ ಹೇಳಿದ್ರು.
ಮಣ್ಣು ಪರೀಕ್ಷೆ ವರದಿ ಯಾವಾಗ ಬರುತ್ತೆ?: ಮಣ್ಣಿನ ಪರೀಕ್ಷೆಯ ವರದಿ ಎರಡು ದಿವದೊಳಗೆ ಬರುತ್ತೆ. ನಮ್ಮಲ್ಲಿ ಲ್ಯಾಬೋರೇಟರಿ ಇರುವುದರಿಂದ ಈ ಬಗ್ಗೆ ಆದಷ್ಟು ಬೇಗ ರಿಪೋರ್ಟ್ ಬರುವಂತೆ ಮಾಡುತ್ತೇವೆ. ಇದು ಕೈಗಾರಿಕೆಯಿಂದ ಬಂದಿದೆಯಾ ಅಥವಾ ಈ ಘಟನೆಗೆ ಮುಖ್ಯ ಕಾರಣವೇನು ಎಂಬುವುದನ್ನು ಮೊದಲು ನಾವು ತಿಳಿದುಕೊಳ್ಳಬೇಕಾಗುತ್ತದೆ ಅಂತ ಅನಂತರಾಮು ತಿಳಿಸಿದ್ರು.
ಯಾವ ಕಾರ್ಖಾನೆಯ ತ್ಯಾಜ್ಯದಿಂದ ಈ ಘಟನೆ ನಡೆದಿದೆ ಎಂಬುವುದನ್ನು ಪತ್ತೆ ಹಚ್ಚಬಹುದಾ?: ಖಂಡಿತಾ.. ತನಿಕೆಯ ಮೂಲಕ ಕಂಡುಹಿಡಿಯಬಹುದು. ಘಟನಾ ಸ್ಥಳದಲ್ಲಿನ ಮಣ್ಣಿನಲ್ಲಿ ಯಾವ ಅಂಶವಿದೆ. ಇದರಿಂದ ಸುತ್ತಮುತ್ತಲಿನ ಕಾರ್ಖಾನೆಯಲ್ಲಿ ಉಪಯೋಗಿಸುವಂತಹ ರಾ ಮೆಟಿರಿಯಲ್ ಗಳು ಅಥವಾ ಆ ಕಾರ್ಖಾನೆಯಿಂದ ಬರುತ್ತಿರುವ ತ್ಯಾಜ್ಯಗಳು ಮಣ್ಣಿನಲ್ಲಿರುವ ಅಂಶಕ್ಕೆ ಹೊಂದಾಣಿಯಾದ್ರೆ ಸುಲಭವಾಗಿ ಪತ್ತೆ ಹಚ್ಚಬಹುದು ಅಂತಾ ತಿಳಿಸಿದ್ದಾರೆ.