ಬೆಂಗಳೂರು: ಭೂಮಿಯಲ್ಲಿ ಬೆಂಕಿ ಕಾಣಿಸಿಕೊಂಡಿರುವ ಘಟನೆ ನಗರದ ಹೊರವಲಯದ ನೆಲಮಂಗಲ ಸಮೀಪದ ಗಂಗಾಧರಯ್ಯನಪಾಳ್ಯ ಬಳಿ ನಡೆದಿದೆ.
ಇಂದು ಬೆಳಗ್ಗೆ ಬಹಿರ್ದೆಸೆಗೆ ತೆರಳಿದ್ದ ಯುವಕ ಆಂಜಿನಪ್ಪನ ಕಾಲು ಬೆಂಕಿಯಿಂದ ಸುಟ್ಟು ಆಸ್ಪತ್ರೆಗೆ ತೆರಳಿದ ವೇಳೆ ಈ ಪ್ರಕರಣ ಬೆಳಕಿಗೆ ಬಂದಿದೆ. ಇನ್ನೂ ವಾತಾವರಣದಲ್ಲಿ ಬೇಸಿಗೆ ಸಮೀಪಿಸುತ್ತಿದಂತೆ ತಾಪಾ ಹೆಚ್ಚಾಗಿರುವ ಜೊತೆಗೆ, ಈ ರೀತಿ ಭೂಮಿಯಲ್ಲಿ ಬೆಂಕಿ ಕಾಣಿಸಿಕೊಂಡಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಇದನ್ನೂ ಓದಿ: ಬೆಂಕಿಯನ್ನೇ ಉಗುಳುತಿದೆ ಭೂಮಿ-ವಿಸ್ಮಯಕಾರಿ ಕೆನ್ನಾಲಿಗೆಗೆ ಬಾಲಕ ಬಲಿ
Advertisement
Advertisement
ಘಟನೆ ನಡೆದ ಗ್ರಾಮದ ಸುತ್ತ ಮುತ್ತ ಕೈಗಾರಿಕೆಗಳು ಇರುವದರಿಂದ ರಾಸಾಯನಿಕ ಪದಾರ್ಥಗಳು ಮಣ್ಣಿನಲ್ಲಿ ಬೆರೆತು ಇಂತಹ ಭೂಮಿಯಲ್ಲಿ ಬೆಂಕಿ ಕಾಣಿಸಿಕೊಂಡಿರಬಹದು ಎಂಬ ಶಂಕೆ ಕೂಡ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಹೆಚ್ಚಿನ ಶೋಧ ನಡೆಸಿದಾಗ ಬೆಂಕಿ ಜ್ವಾಲೆಯ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಲಿದೆ. ಇದನ್ನೂ ಓದಿ: ಬೆಳಗಾವಿ: ಗ್ರಾಮಸ್ಥರೊಬ್ಬರ ಮನೆಯ ನಿರ್ದಿಷ್ಟ ಪ್ರದೇಶದ ಭೂಮಿಯಲ್ಲಿ ಕಾವು, 68 ಡಿಗ್ರಿ ಉಷ್ಣಾಂಶ
Advertisement
ಇದನ್ನೂ ಓದಿ: ಮೈಸೂರಿನ ಬೆಲವತ್ತದಲ್ಲಿ ಭೂಜ್ವಾಲೆಗೆ ಕಾರಣವೇನು?- ಭೂವಿಜ್ಞಾನಿಗಳು ಹೀಗಂತಾರೆ