ರಾಯಚೂರು: ಮೇವು ಸಾಗಣೆ ಟ್ರ್ಯಾಕ್ಟರ್ ಗೆ ಆಕಸ್ಮಿಕ ಬೆಂಕಿ ಹತ್ತಿದ ಪರಿಣಾಮ ಸಾವಿರಾರು ರೂ. ಮೌಲ್ಯದ ಮೇವು ಭಸ್ಮ, ಟ್ರ್ಯಾಕ್ಟರ್ ಸುಟ್ಟು ಕರಕಲಾಗಿರುವ ಘಟನೆ ಜಿಲ್ಲೆಯ ದೇವದುರ್ಗದ ಜಾಗಟಗಲ್‍ನಲ್ಲಿ ಬಳಿ ನಡೆದಿದೆ.
ಅರಕೇರಾ ಗ್ರಾಮದ ರಾಮಣ್ಣ ಎಂಬರಿಗೆ ಸೇರಿದ ಟ್ರ್ಯಾಕ್ಟರ್ ಇದಾಗಿದ್ದು, ಜಾಗಟಗಲ್ ನಿಂದ ಅರಕೇರಾಕ್ಕೆ ಮೇವು ಸಾಗಿಸುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಟ್ರ್ಯಾಕ್ಟರ್ ಗೆ ಬೆಂಕಿ ಹತ್ತಿದೆ.
- Advertisement
ಟ್ರ್ಯಾಕ್ಟರ್ ನಲ್ಲಿ ಬೆಂಕಿ ಹೊತ್ತಿಕೊಂಡಿರುವ ಕುರಿತು ಮಾಹಿತಿ ಪಡೆದ ಅಗ್ನಿ ಶಾಮಕ ದಳ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ. ಗಬ್ಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
- Advertisement