Districts
ಕೊಪ್ಪಳದಲ್ಲಿ ಬೆಳ್ಳಂಬೆಳಗ್ಗೆ ಹೊತ್ತಿ ಉರಿದ ಖಾಸಗಿ ಬಸ್- ಪ್ರಯಾಣಿಕರು ಪಾರು

ಕೊಪ್ಪಳ: ಇಲ್ಲಿನ ಖಾಸಗಿ ಬಸ್ಸೊಂದರಲ್ಲಿ ಬೆಳ್ಳಂಬೆಳಗ್ಗೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಬಸ್ ನಡುರಸ್ತೆಯಲ್ಲೇ ಹೊತ್ತಿ ಉರಿದ ಘಟನೆ ನಡೆದಿದೆ.
ಕೊಪ್ಪಳ ತಾಲೂಕಿನ ವದಗನಾಳ ಬಳಿ ಘಟನೆ ನಡೆದಿದ್ದು. ಗ್ರೀನ್ ಲೈನ್ ಎಂಬ ಖಾಸಗಿ ಬಸ್ ಬೆಂಗಳೂರಿನಿಂದ ಮುಂಡರಗಿಗೆ ಹೊರಟಿತ್ತು. ಅಂತೆಯೇ ಕೊಪ್ಪಳದ ವದಗನಾಳ ಗ್ರಾಮದ ಬಳಿ ಬಸ್ ಹಿಂದೆ ಬೆಂಕಿ ಕಾಣಿಸಿಕೊಂಡಿದೆ. ಇದು ವಾಯುವಿಹಾರಕ್ಕೆ ಬಂದಿದ್ದ ಕೆಲಜನರ ಕಣ್ಣಿಗೆ ಬಿದ್ದಿದ್ದು, ಕೂಡಲೇ ಅವರು ಬಸ್ ಗೆ ಬೆಂಕಿ ಹೊತ್ತಿದೆ ಅಂತ ಕೂಗಿದ್ದಾರೆ. ತಕ್ಷಣವೇ ಬಸ್ ನಿಲ್ಲಿಸಿ ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ. ಬಳಿಕ ಅಗ್ನಿಶಾಮಕ ದಳದವರಿಗೆ ತಿಳಿಸಿದ್ದಾರೆ.
ಅಗ್ನಿಶಾಮಕ ದಳದವರು ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವಲ್ಲಿ ಹರಸಾಹಸ ಪಟ್ರು. ಈ ಬಸ್ ನಲ್ಲಿ ಹತ್ತು ಜನ ಪ್ರಯಾಣಿಕರಿದ್ದು, ಸದ್ಯ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದ್ರೆ ಪ್ರಯಾಣಿಕರ ಲಗೇಜ್ ಮಾತ್ರ ಸುಟ್ಟು ಕರಕಲಾಗಿವೆ.
https://www.youtube.com/watch?v=H4A22qYs0wA&feature=youtu.be
