ಹುಬ್ಬಳ್ಳಿ: ಶೇಂಗಾ ಬಣವೆಗೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ 10 ಟ್ರ್ಯಾಕ್ಟರ್ (Tractor) ಶೇಂಗಾ (Peanut) ಬಳ್ಳಿ ಹೊತ್ತಿ ಉರಿದಿದ್ದು, ಹೊತ್ತಿ ಉರಿಯುತ್ತಿರುವ ಬಣವೆ ಮುಂದೆ ರೈತನ ಗೋಳಾಟ ನಡೆಸಿದ ಘಟನೆ ಧಾರವಾಡದಲ್ಲಿ ನಡೆದಿದೆ.
ಜಿಲ್ಲೆಯ ಕುಂದಗೋಳ ತಾಲೂಕಿನ ಹರ್ಲಾಪೂರ ಗ್ರಾಮದ ರೈತ ರಾಮಣ್ಣ ಬಸವಣ್ಣೆಪ್ಪ ಬಡ್ನಿ ಅವರಿಗೆ ಸೇರಿದ ಶೇಂಗಾ ಬಳ್ಳಿ ಬೆಂಕಿಗೆ ಆಹುತಿಯಾಗಿದೆ. ಜಮೀನಿನಲ್ಲಿ ಸಂಗ್ರಹಿಸಿದ ಶೇಂಗಾ ಬಳ್ಳಿಗೆ ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಪರಿಣಾಮ ಸುಮಾರು ಐದು ಲಕ್ಷದ ಶೇಂಗಾ ಬಳ್ಳಿ ನಾಶವಾಗಿದೆ.
ಬಣವೆಗೆ ಬೆಂಕಿ ಹತ್ತಿರುವುದನ್ನು ಕಂಡ ರೈತ ಗೋಳಾಟ ನಡೆಸಿ ತನ್ನ ಆಕ್ರನಂದನ ಹೊರಹಾಕಿದ್ದು, ಸೂಕ್ತ ಪರಿಹಾರಕ್ಕೆ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಚೀನಾದಲ್ಲಿ ಕೊರೊನಾ ಆರ್ಭಟ – ಉದ್ಯೋಗ ಕಳ್ಕೊಂಡು ಬೀದಿಗೆ ಬಿದ್ದ 2 ಕೋಟಿ ಯುವಜನರು