ರಾಯಚೂರು: ನಾಡಿನೆಲ್ಲೆಡೆ ಜನ ಮಹಾಶಿವರಾತ್ರಿ ಸಂಭ್ರಮದಲ್ಲಿದ್ದರೆ ರಾಯಚೂರು ತಾಲೂಕಿನ ಜೇಗರಕಲ್ ಗ್ರಾಮದಲ್ಲಿ ಮೇವಿನ ಬಣವೆಗಳು ಸುಟ್ಟು ರೈತರು ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿದ್ದಾರೆ.
ಗ್ರಾಮದ ಈರಪ್ಪ, ಮಾಳಪ್ಪ ಅನ್ನೋ ಇಬ್ಬರು ರೈತರ ಒಟ್ಟು ಆರು ಬಣವೆಗಳು ಆಕಸ್ಮಿಕವಾಗಿ ತಗುಲಿದ ಬೆಂಕಿಗೆ ಸುಟ್ಟು ಭಸ್ಮವಾಗಿವೆ. ಬರಗಾಲ ಹಿನ್ನೆಲೆ ಮುನ್ನೆಚ್ಚರಿಕೆಯಾಗಿ ದನಕರುಗಳಿಗೆ ಶೇಖರಿಸಲಾಗಿದ್ದ ಸುಮಾರು 3 ಲಕ್ಷ ರೂಪಾಯಿ ಮೌಲ್ಯದ ಒಣ ಮೇವಿನ ಬಣವೆಗಳು ಬೂದಿಯಾಗಿವೆ.
ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದರಾದ್ರೂ ಎಲ್ಲಾ ಬಣವೆಗಳು ಸುಟ್ಟುಹೋಗಿವೆ. ಘಟನೆ ಹಿನ್ನೆಲೆ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.