ಬೆಂಗಳೂರು: ಸಿನಿಮಾ ಚಿತ್ರೀಕರಣದ ಸೆಟ್‌ನಲ್ಲಿ ಬೆಂಕಿ ಅವಘಡವಾದ ಘಟನೆ ಮಂಗಳೂರು (Mangaluru) ಹೊರವಲಯದ ಚೇಳಾರು ಎಂಬಲ್ಲಿ ನಡೆದಿದೆ.
ಕಾಂತಾರ (Kantara) ಸಿನಿಮಾದ ಗುರುವ ಪಾತ್ರಧಾರಿಯಾಗಿದ್ದ ಸ್ವರಾಜ್ ಶೆಟ್ಟಿಯವರು (Swaraj Shetty) ಚಿತ್ರಕಥೆ ಹಾಗೂ ನಿರ್ದೇಶನ ಮಾಡುತ್ತಿರುವ ʼನೆತ್ತರಕೆರೆʼ ಹೆಸರಿನ ತುಳು ಹಾಗೂ ಕನ್ನಡ ಸಿನಿಮಾದ ಚಿತ್ರೀಕರಣದ ವೇಳೆ ಈ ಘಟನೆ ನಡೆದಿದೆ.
Advertisement
ಸಿನಿಮಾ ಚಿತ್ರೀಕರಣಕ್ಕಾಗಿ ಹಾಕಿದ್ದ ಬಾರ್ ಸೆಟ್‌ನಲ್ಲಿ ಶೂಟಿಂಗ್ ನಡೆಯುತ್ತಿರುವಾಗಲೇ ಬೆಂಕಿ ಕಾಣಿಸಿಕೊಂಡಿದೆ. ಇದನ್ನೂ ಓದಿ: ಇನ್ಫಿ ಸಹ ಸಂಸ್ಥಾಪಕ ಕ್ರಿಸ್ ಸೇರಿ 18 ಮಂದಿ ವಿರುದ್ಧ ಅಟ್ರಾಸಿಟಿ ಕೇಸ್
Advertisement
Advertisement
ಬಾರ್ ಅಡುಗೆ ಕೋಣೆಯಲ್ಲಿ ಅಡುಗೆ ಮಾಡುವ ದೃಶ್ಯ ಚಿತ್ರೀಕರಣವಾಗುತ್ತಿದ್ದ ವೇಳೆ ಬಾಣಲೆಯಲ್ಲಿದ್ದ ಎಣ್ಣೆಗೆ ದಿಢೀರ್ ಬೆಂಕಿ ಕಾಣಿಸಿಕೊಂಡಿದ್ದು ಪಕ್ಕದಲ್ಲಿದ್ದ ಬಟ್ಟೆಗಳಿಗೆ ಬೆಂಕಿ ತಗುಲಿ ಇಡೀ ಸೆಟ್ ಗೆ ಬೆಂಕಿ ಆವರಿಸಿದೆ.
Advertisement
ತಕ್ಷಣ ಟ್ಯಾಂಕರ್ ನಲ್ಲಿ ನೀರು ತಂದು ಬೆಂಕಿ ಆರಿಸಿದ್ದು, ಬಾರ್ ಸೆಟ್ ಒಂದು ಭಾಗ ಪೂರ್ಣ ಬೆಂಕಿಗಾಹುತಿಯಾಗಿದೆ. ಸುಮಾರು 2 ಲಕ್ಷ ರೂ. ನಷ್ಟವಾಗಿದೆ ಎಂದು ಚಿತ್ರ ತಂಡ ಅಂದಾಜಿಸಿದೆ.