ಹಾವೇರಿ: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ (Short Circuit) ಮೆಕ್ಕೆಜೋಳದ ರಾಶಿಗೆ ಬೆಂಕಿ ಬಿದ್ದು 10 ಕ್ಕೂ ಅಧಿಕ ಬಣವೆಗಳು ಸುಟ್ಟು ಭಸ್ಮವಾದ ಘಟನೆ ಹಾವೇರಿ (Haveri) ಜಿಲ್ಲೆ ಸವಣೂರು (Savanur) ತಾಲ್ಲೂಕಿನ ಕಲಕೋಟಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರೈತರ 4 ಮೆಕ್ಕೆಜೋಳದ ತೆನೆಯ ರಾಶಿ, 6 ಮೇವಿನ ಬಣವೆಗಳು ಸುಟ್ಟು ಭಸ್ಮವಾಗಿದೆ. ರೈತರಾದ ದ್ಯಾಮಣ್ಣ ತಳವಾರ ಮತ್ತು ಮೃತ್ಯುಂಜಯ ಹಿರೇಮಠ ಸೇರಿದಂತೆ ಹಲವು ರೈತರು ಮೆಕ್ಕೆಜೋಳದ ರಾಶಿ ಮಾಡಲು ಹಾಕಿದ್ದರು. ಅಲ್ಲಿದ್ದ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬಣವೆಗಳಿಗೆ ಬೆಂಕಿ ಹತ್ತಿ ಸುಟ್ಟು ಭಸ್ಮವಾಗಿದೆ. ಇದನ್ನೂ ಓದಿ: ಕಾಂಗ್ರೆಸ್ ಬಂದ್ಮೇಲೆ ಸಂಕ್ರಾಂತಿಗೆ ಹಸುವಿನ ಕೆಚ್ಚಲು ಕೊಯ್ದಿರೋ ಗಿಫ್ಟ್ ಕೊಟ್ಟಿದ್ದಾರೆ: ಅಶೋಕ್ ಕಿಡಿ
Advertisement
Advertisement
ಸುಮಾರು 10 ಲಕ್ಷಕ್ಕೂ ಅಧಿಕ ಮೌಲ್ಯದ ಮೆಕ್ಕೆಜೋಳದ ತೆನೆಯ ರಾಶಿ ಸುಟ್ಟು ಭಸ್ಮವಾಗಿದೆ. ಗ್ರಾಮಸ್ಥರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಸವಣೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಇದನ್ನೂ ಓದಿ: ಹಸುಗಳನ್ನು ಹೋರಾಟಕ್ಕೆ ಕರೆದುಕೊಂಡು ಹೋಗಿದ್ದಕ್ಕೆ ಕೆಚ್ಚಲಿಗೆ ಕತ್ತರಿ!
Advertisement