ಕಂಪಾಲಾ: ಅಂಧರ ಶಾಲೆಗೆ (School For The Blind) ಬೆಂಕಿ (Fire) ಬಿದ್ದಿರುವ ಪರಿಣಾಮ ಮಕ್ಕಳು ಸೇರಿದಂತೆ 11 ಜನರು ಸಾವನ್ನಪ್ಪಿರುವ ಭೀಕರ ಘಟನೆ ಉಗಾಂಡಾದಲ್ಲಿ (Uganda) ನಡೆದಿರುವುದಾಗಿ ಮಂಗಳವಾರ ಸ್ಥಳೀಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ಉಗಾಂಡಾದ ರಾಜಧಾನಿ ಕಂಪಾಲಾದಿಂದ (Kampala) ಹೊರಗಿರುವ ಗ್ರಾಮೀಣ ಸಮುದಾಯದ ಶಾಲೆಯೊಂದರಲ್ಲಿ ನಡೆದಿದೆ. ಮುಕೊನೊ ಜಿಲ್ಲೆಯ ಅಂಧರ ಶಾಲೆಯಲ್ಲಿ ರಾತ್ರಿಯ ವೇಳೆ ಘಟನೆ ಸಂಭವಿಸಿದ್ದಾಗಿ ಪೊಲೀಸ್ ವಕ್ತಾರ ಲ್ಯೂಕ್ ಓವೊಯೆಸಿಗಿರ್ ಅವರು ತಿಳಿಸಿದ್ದಾರೆ. ಇದನ್ನೂ ಓದಿ: ವಿಶ್ವಾದ್ಯಂತ ವಾಟ್ಸಪ್‌ಗೂ ಗ್ರಹಣ – ಸಂದೇಶ ಕಳುಹಿಸಲಾಗದೇ ಜನರ ಒದ್ದಾಟ
Advertisement
Advertisement
ಘಟನೆಯ ಬಗ್ಗೆ ಅಧಿಕಾರಿಗಳು ವಿವರವಾದ ಮಾಹಿತಿ ನೀಡಿಲ್ಲವಾದರೂ ಅನಾಹುತದ ಬಗ್ಗೆ ಪೂರ್ವ ಆಫ್ರಿಕನ್ ದೇಶದ ಶಿಕ್ಷಣ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ.
Advertisement
ಈ ಹಿಂದೆ 2022ರಲ್ಲಿ ಕಂಪಾಲಾದ ಪ್ರಮುಖ ಬೋರ್ಡಿಂಗ್ ಶಾಲೆಯ 2 ವಸತಿ ನಿಲಯಗಳು ಪ್ರತ್ಯೇಕ ಘಟನೆಗಳಲ್ಲಿ ಬೆಂಕಿ ತಗುಲಿ ನಾಶವಾಗಿತ್ತು. ಸದ್ಯ ಘಟನೆಯಲ್ಲಿ ಯಾರಿಗೂ ಗಾಯಗಳಾಗಿರಲಿಲ್ಲ. 2008ರಲ್ಲಿ ಕಂಪಾಲಾ ಬಳಿಯ ಬೋರ್ಡಿಂಗ್ ಶಾಲೆಯಲ್ಲಿ ರಾತ್ರಿಯ ವೇಳೆ ಏಕಾಏಕಿ ಬೆಂಕಿ ಕಾಣಿಸಿಕೊಂಡು, 19 ವಿದ್ಯಾರ್ಥಿಗಳು ಸಾವನ್ನಪ್ಪಿದ್ದರು. ಇದನ್ನೂ ಓದಿ: ಮಹಿಳೆಯರನ್ನು ಐಟಂ ಎಂದು ಕರೆಯುವಂತಿಲ್ಲ- ರೋಡ್ ರೋಮಿಯೋಗಳಿಗೆ ಕೋರ್ಟ್ ಖಡಕ್ ಎಚ್ಚರಿಕೆ