ಅಂಕಾರ: ಇಸ್ತಾಂಬುಲ್‌ನ ಜೈಲಿನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, 20 ಕೈದಿಗಳು ಸೇರಿ ಒಬ್ಬ ಜೈಲಿನ ವಾರ್ಡನ್‌ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಸ್ತಾಂಬುಲ್‌ನ ಉಮ್ರಾನಿಯೇ ಜೈಲಿನಲ್ಲಿ ಶುಕ್ರವಾರ ಬೆಂಕಿ ಹೊತ್ತಿಕೊಂಡು ಉರಿದಿದೆ. ಬೆಂಕಿ ತಗುಲಿ ಗಾಯಗಳಾಗಿರುವ ಕೈದಿಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಸದ್ಯ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಟರ್ಕಿಯ ನ್ಯಾಯ ಸಚಿವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಆಧಾರ್ ಪೌರತ್ವದ ಪುರಾವೆಯಲ್ಲ: ಸಂಸತ್‌ನಲ್ಲಿ ಕೇಂದ್ರ ಸ್ಪಷ್ಟನೆ
Advertisement
Advertisement
ಟರ್ಕಿಯ ಜೈಲಿನಲ್ಲಿದ್ದ ಕೈದಿಗಳು ಬಂಧನದ ಪರಿಸ್ಥಿತಿಗಳನ್ನು ಪ್ರತಿಭಟಿಸಿ ಹಾಸಿಗೆಗಳಿಗೆ ಬೆಂಕಿ ಹಚ್ಚಿದ್ದಾರೆ. ಪರಿಣಾಮ ಬೆಂಕಿ ಜೈಲಿನ ಎಲ್ಲೆಡೆ ಹಬ್ಬಿದೆ. ಬೆಂಕಿ ನಂದಿಸಲು ನೆರೆಯ ಜಿಲ್ಲೆಗಳಿಂದ ಅಗ್ನಿಶಾಮಕ ವಾಹನಗಳನ್ನು ಕಳುಹಿಸಲಾಗಿದೆ. ಸದ್ಯ ಯಾರೊಬ್ಬರ ಸ್ಥಿತಿಯೂ ಗಂಭೀರವಾಗಿಲ್ಲ. ಎಲ್ಲವನ್ನೂ ನಿಯಂತ್ರಣಕ್ಕೆ ತರಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಎನ್‌ಕೌಂಟರ್ – ಇಬ್ಬರು ಉಗ್ರರ ಸಾವು
Advertisement
ಬೆಂಕಿ ಒಂದು ವಾರ್ಡ್ನಲ್ಲಿ ಮೊದಲಿಗೆ ಉದ್ಭವವಾಗಿತ್ತು. ಅದನ್ನು ನಿಯಂತ್ರಣಕ್ಕೆ ತರಲು ಸಾಧ್ಯವಾಗದಾಗ ಅಗ್ನಿಶಾಮಕ ದಳವನ್ನು ಕರೆಸಲಾಯಿತು. ಬೆಂಕಿಯಿಂದಾಗಿ ಜೈಲಿನ ಪರಿಸ್ಥಿತಿ ಹದಗೆಟ್ಟಿದ್ದು, ಕೈದಿಗಳನ್ನು ಬಂಧನಕ್ಕೆ ಬೇರೆಡೆ ಸ್ಥಳಾಂತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.