ಮುಂಬೈ: ಭಾರತದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿಯವರ ಆ್ಯಂಟಿಲಿಯಾ ಮನೆಯಲ್ಲಿ ಸೋಮವಾರ ರಾತ್ರಿ ಅಗ್ನಿ ಅವಘಡ ಸಂಭವಿಸಿದೆ.
ವಿಶ್ವದ ಅತ್ಯಂತ ದುಬಾರಿ ಮನೆಗಳಲ್ಲಿ ಒಂದಾದ ಈ 27 ಅಂತಸ್ತಿನ ಆ್ಯಂಟಿಲಿಯಾ ಕಟ್ಟಡದಲ್ಲಿ 9 ನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಕೆಲವೇ ನಿಮಿಷಗಳಲ್ಲಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆಯಿಂದ ಯಾವುದೇ ಆಸ್ತಿ-ಪಾಸ್ತಿ ನಷ್ಟವಾಗಿಲ್ಲ ಅಂತ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement
Advertisement
ಅಂಬಾನಿ ಮನೆಯಲ್ಲಿ ಅಗ್ನಿ ಅವಘಡ ಸಂಭವಿಸಿದೆ ಅಂತ ನಮಗೆ 9 ಗಂಟೆಯ ವೇಳೆಗೆ ಕರೆ ಬಂದಿತ್ತು. 9ನೇ ಮಹಡಿಯಲ್ಲಿರುವ 4ಜಿ ಆಂಟೆನಾದಿಂದ ಈ ಅವಘಡ ಸಂಭವಿಸಿದೆ ಅಂತ ಮುಂಬೈ ನಗರಸಭೆಯ ವಿಪತ್ತು ನಿರ್ವಹಣಾ ಘಟಕದ ಮುಖ್ಯ ಅಧಿಕಾರಿ ಮಹೇಶ್ ನರ್ವೆಕರ್ ತಿಳಿಸಿದ್ದಾರೆ.
Advertisement
ಮುಂಬೈನ ಮುಖ್ಯ ಅಗ್ನಿಶಾಮಕ ಅಧಿಕಾರಿ ಪ್ರಭಾತ್ ರಹಾಂಗ್ಡಾಲೆ ಈ ಬಗ್ಗೆ ಪ್ರತಿಕ್ರಿಯಿಸಿ, ಬೆಂಕಿಯ ತೀವ್ರತೆ ತೀರಾ ಕಡಿಮೆ ಇತ್ತು. ಹೀಗಾಗಿ ಅಗ್ನಿಶಾಮಕ ಸಿಬ್ಬಂದಿಯ ನೆರವಿನಿಂದ ಬೆಂಕಿ ನಂದಿಸುವ ಕಾರ್ಯ ಬೇಗನೆ ಯಶಸ್ವಿಯಾಯಿತು. 9 ನೇ ಮಹಡಿಯಲ್ಲಿರುವ ಮೊಬೈಲ್ ಟವರ್‍ಗೆ ಬೆಂಕಿ ಹೊತ್ತಿಕೊಂಡಿತ್ತು. ಅದನ್ನು ನಂದಿಸಲು 3 ಅಗ್ನಿಶಾಮಕ ವಾಹನ, ಎರಡು ಏಣಿ ವಾಹನ ಹಾಗೂ ಒಂದು ನೀರಿನ ಟ್ಯಾಂಕರ್ ಬಳಸಲಾಯ್ತು ಎಂದು ಹೇಳಿದ್ರು.
Advertisement
ಅಂಬಾನಿ ಕುಟುಂಬ ಈ ಮನೆಯಲ್ಲಿ 2010ರಿಂದ ವಾಸವಿದ್ದು, ಘಟನೆ ನಡೆದ ವೇಳೆಯಲ್ಲಿ ಕುಟುಂಬ ಈ ಮನೆಯಲ್ಲಿರಲಿಲ್ಲ. ಆ್ಯಂಟಿಲಿಯಾ ಮನೆ 13 ಸಾವಿರ ಕೋಟಿ. ರೂ. ಮೌಲ್ಯದ ಆ್ಯಂಟಿಲಿಯಾ ಮನೆ ಸುಮಾರು 557 ಅಡಿ ಎತ್ತರವಿದೆ.
Fire that broke out at Antilia building on Altamount Road now under control, says #Mumbai Fire Brigade pic.twitter.com/eEW5mN9nLN
— ANI (@ANI) July 10, 2017