ಬೆಂಗಳೂರು: ನಗರದ ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಗ್ನಿ ಅವಘಡ ಸಂಭವಿಸಿದೆ.
ಕೆಐಎಎಲ್‍ನ ಟರ್ಮಿನಲ್ ಮುಂಭಾಗದ ಬುರಿಟೋ ಬಾಯ್ಸ್ ಎನ್ನುವ ಹೆಸರಿನ ಪಿಜ್ಜಾ-ಕೆಫೆ ಶಾಪ್ ಬೆಂಕಿಗೆ ಅಹುತಿಯಾಗಿದೆ. ಶಾಪ್‍ನ ಆಡುಗೆ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕಿಚನ್ ಸಂಪೂರ್ಣ ಧಗ ಧಗ ಹೊತ್ತಿ ಉರಿದಿದೆ.
Advertisement
Advertisement
ವಿಮಾನ ನಿಲ್ದಾಣ ತುಂಬಾ ದಟ್ಟ ಹೊಗೆ ಬೆಂಕಿಯ ದೃಶ್ಯ ಕಂಡ ಪ್ರಯಾಣಿಕರು, ಸ್ಥಳೀಯರು ಕ್ಷಣ ಕಾಲ ಆತಂಕಕ್ಕೀಡಾಗಿದರು. ನೋಡ ನೋಡುತ್ತಲೇ ಇಡೀ ಶಾಪ್ ಬೆಂಕಿಗೆ ಅಹುತಿಯಾಗಿದೆ. ಅಷ್ಟರಲ್ಲಿ ಕೆಐಎಎಲ್ ನ ಆಗ್ನಿಶಾಮಕ ದಳ ಸಿಬ್ಬಂದಿ ಬೆಂಕಿಯನ್ನ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಅವಘಡಕ್ಕೂ ಮುನ್ನ ಎದ್ದೇಳಿ – ಹೈದರಾಬಾದ್ ಏರ್ ಪೋರ್ಟ್ ವಿರುದ್ಧ ರಿತೇಶ್ ಆಕ್ರೋಶ
Advertisement
ಇತ್ತೀಚೆಗೆ ಟರ್ಮಿನಲ್ ಮುಂಭಾಗ ವ್ಯಾಪಾರ ವಹಿವಾಟಿನ ಕೇಂದ್ರವಾಗಿ ಮಾರ್ಪಾಡಾಗಿದ್ದು, ಸಾಕಷ್ಟು ಶಾಪಿಂಗ್ ಸೆಂಟರ್ ಹೋಟೆಲ್ ಕೆಫೆಗಳು ತಲೆ ಎತ್ತಿವೆ. ಶಾಪಿಂಗ್ ಸೆಂಟರ್‍ಗಳು ಒಂದಕ್ಕೊಂದು ಹೊಂದಿಕೊಂಡಿದ್ದು ಒಂದರಿಂದ ಒಂದಕ್ಕೆ ಬೆಂಕಿ ಹೊತ್ತಿಕೊಳ್ಳುವ ಸಾಧ್ಯತೆ ಇದೆ.
Advertisement
ಅದೃಷ್ಟವಶಾತ್ ಬೆಂಕಿ ನಂದಿಸುವಲ್ಲಿ ಆಗ್ನಿಶಾಮಕದಳದ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮೇಲ್ನೋಟಕ್ಕೆ ಶಾರ್ಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಢ ನಡೆದಿರಬಹದು ಎಂದು ಊಹಿಸಲಾಗಿದೆ.