ಚಿಕ್ಕಬಳ್ಳಾಪುರ: ಯುಗಾದಿ ಹಬ್ಬದ ದಿನವೇ ಸರ್ಕಾರಿ ಕಚೇರಿಯಲ್ಲಿ ಬೆಂಕಿ (Fire accident) ಹೊತ್ತಿಕೊಂಡು ಮಹತ್ವದ ದಾಖಲೆಗಳು ಸುಟ್ಟು ಬೂದಿಯಾಗಿರುವ ಘಟನೆ ಚಿಕ್ಕಬಳ್ಳಾಪುರ (Chikkaballapura) ನಗರದಲ್ಲಿ ನಡೆದಿದೆ.
ನಗರದ ಪಶುಪಾಲನಾ ಹಾಗೂ ಪಶುವೈದ್ಯ ಸೇವಾ ಇಲಾಖೆಯ ಆವರಣದಲ್ಲಿರುವ ಸಹಾಯಕ ನಿರ್ದೇಶಕರ ಕಚೇರಿಗೆ ಬೆಂಕಿ ಬಿದ್ದಿದೆ. ದಾಖಲೆಗಳನ್ನ (Documents) ಸಂಗ್ರಹ ಮಾಡಿದ್ದ ಕೊಠಡಿಯಲ್ಲೇ ಬೆಂಕಿ ತಗುಲಿದ್ದು ದಾಖಲೆಗಳೆಲ್ಲವೂ ಸುಟ್ಟು ಬೂದಿಯಾಗಿವೆ. ರಾತ್ರಿಯೇ ಬೆಂಕಿ ಹೊತ್ತಿಕೊಂಡು ಕಚೇರಿ ಧಗ ಧಗ ಹೊತ್ತಿ ಉರಿದಿದೆ. ಇದನ್ನೂ ಓದಿ: L2: Empuraan | ವಿವಾದ ಸುಳಿಯಲ್ಲಿ ಬ್ಲಾಕ್‌ಬಸ್ಟರ್ ಸಿನಿಮಾ – 17 ದೃಶ್ಯಗಳಿಗೆ ಕತ್ತರಿ
ಬೆಳಗ್ಗೆ ಸಿಬ್ಬಂದಿ ನೋಡಿದಾಗ ಬೆಂಕಿ ಅವಘಡ ಪ್ರಕರಣ ಬೆಳಕಿಗೆ ಬಂದಿದೆ. ಆಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಅಳಿದುಳಿದು ಇನ್ನೂ ಉರಿಯುತ್ತಿದ್ದ ದಾಖಲೆಗಳನ್ನ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಯುಗಾದಿ ಪುಣ್ಯ ಸ್ನಾನಕ್ಕೆ ತೆರಳಿದ್ದ ಬಾಲಕ ತ್ರಿವೇಣಿ ಸಂಗಮದಲ್ಲಿ ಮುಳುಗಿ ಸಾವು
ಇಡೀ ಕಚೇರಿಯೇ ಹೊತ್ತಿ ಉರಿದಿದ್ದು… ಬೇಕಂತಲೇ ಯಾರಾದ್ರೂ ಬೆಂಕಿ ಇಟ್ರಾ ಎಂಬ ಅನುಮಾನವೂ ಮೂಡಿದೆ. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಇದನ್ನೂ ಓದಿ: ಹೆಂಡ್ತಿ ಕೊಂದು ಮಹಾರಾಷ್ಟ್ರ ಬಾರ್ಡರ್‌ನಲ್ಲಿ ವಿಷ ಖರೀದಿಸಿದ್ದ ಟೆಕ್ಕಿ – ಹಂತಕನನ್ನ ಪುಣೆಯಿಂದ ಕರೆತಂದ ಪೊಲೀಸರು