– ಸುಪ್ರೀಂಕೋರ್ಟ್ ಸಿಜೆಐ ಸಂಜೀವ್ ಖನ್ನಾ ಕೊಲಿಜಿಯಂ ಸಭೆ
– ಅಲಹಾಬಾದ್ ಹೈಕೋರ್ಟ್‌ಗೆ ವರ್ಗಾಯಿಸುವ ನಿರ್ಧಾರ
ನವದೆಹಲಿ: ದೆಹಲಿ ಹೈಕೋರ್ಟ್ (Delhi High Court) ನ್ಯಾಯಮೂರ್ತಿ ಯಶವಂತ್ ವರ್ಮಾ (Yashwant Varma) ಅವರ ಮನೆಯಲ್ಲಿ ಸಂಭವಿಸಿದ ಅಗ್ನಿ ಅವಘಡದ ನಂತರ ಅಪಾರ ಪ್ರಮಾಣದ ನಗದು ಹಣ ಪತ್ತೆಯಾಗಿದ್ದು ಈ ಬೆಳವಣಿಗೆ ಭಾರಿ ಚರ್ಚೆಗೆ ಕಾರಣವಾಗಿದೆ.
ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ (Supreme Court) ಸಂಜೀವ್ ಖನ್ನಾ (Sanjiv Khanna) ಕೊಲಿಜಿಯಂ (Collegium) ಸಭೆ ಕರೆದು ನ್ಯಾಯಮೂರ್ತಿ ಯಶವಂತ್ ವರ್ಮಾ ಅವರನ್ನು ತಕ್ಷಣವೇ ದೆಹಲಿ ಹೈಕೋರ್ಟ್‌ನಿಂದ ಮಾತೃ ಸಂಸ್ಥೆ ಅಲಹಾಬಾದ್ ಹೈಕೋರ್ಟ್‌ಗೆ ವರ್ಗಾಯಿಸುವ ನಿರ್ಧಾರ ಕೈಗೊಂಡಿದ್ದಾರೆ. ಇದನ್ನೂ ಓದಿ: ವೈಯಕ್ತಿಕ ಜೀವನವನ್ನು ಖಾಸಗಿಯಾಗಿಡುತ್ತೇನೆ: ಬ್ರೇಕಪ್ ಬಗ್ಗೆ ತಮನ್ನಾ ಮಾತು
ವರದಿಗಳ ಪ್ರಕಾರ, ನ್ಯಾಯಮೂರ್ತಿ ಯಶವಂತ್ ವರ್ಮಾ ಅವರು ಮನೆಯಲ್ಲಿ ಇಲ್ಲದ ವೇಳೆ ಅವರ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕುಟುಂಬಸ್ಥರು ಪೊಲೀಸ್ ಮತ್ತು ಅಗ್ನಿಶಾಮಕ ದಳ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಧಾವಿಸಿದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು. ಆದರೆ, ತಪಾಸಣೆಯ ವೇಳೆ ಅಲ್ಲಿ ದೊಡ್ಡ ಮೊತ್ತದ ನಗದು ಹಣ ಇರುವುದು ಬೆಳಕಿಗೆ ಬಂದಿದೆ. ಈ ಹಣದ ಮೂಲದ ಬಗ್ಗೆ ಇನ್ನೂ ಯಾವುದೇ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಇದನ್ನೂ ಓದಿ: ಸಿಎಂ ಕುರ್ಚಿಗಾಗಿ ಹನಿಟ್ರ‍್ಯಾಪ್ – ಸರ್ಕಾರದಲ್ಲಿ ದಲಿತ ಮಂತ್ರಿಗೆ ರಕ್ಷಣೆ ಇಲ್ಲ: ಅಶೋಕ್
ಈ ಘಟನೆಯು ನ್ಯಾಯಮೂರ್ತಿಗಳ ವೃತ್ತಿಪರ ನಡವಳಿಕೆ ಮತ್ತು ಸಮಗ್ರತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿವೆ. ನ್ಯಾಯಮೂರ್ತಿ ವರ್ಮಾ ವಿರುದ್ಧ ತನಿಖೆ ಆರಂಭಿಸುವ ಮತ್ತು ದೋಷಾರೋಪಣೆ ಪ್ರಕ್ರಿಯೆ ಪ್ರಾರಂಭಿಸುವ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಕ ಸಾವು
ನ್ಯಾ. ವರ್ಮಾ ಅವರನ್ನು ವರ್ಗಾವಣೆ ಮಾಡುವುದರಿಂದ ನ್ಯಾಯಾಂಗದ ವರ್ಚಸ್ಸು ಹಾಳಾಗುತ್ತದೆ ಮತ್ತು ಕಾನೂನು ವ್ಯವಸ್ಥೆಯಲ್ಲಿ ಸಾರ್ವಜನಿಕರ ವಿಶ್ವಾಸ ಕುಸಿಯುತ್ತದೆ ಎಂದು ಕೊಲಿಜಿಯಂನ ಕೆಲವು ನ್ಯಾಯಾಧೀಶರು ಕಳವಳ ವ್ಯಕ್ತಪಡಿಸಿದ್ದಾರೆ. ನ್ಯಾ. ವರ್ಮಾ ಅವರು ಸ್ವಯಂಪ್ರೇರಣೆಯಿಂದ ರಾಜೀನಾಮೆ ನೀಡಬೇಕೆಂದು ಕೊಲಿಜಿಯಂನ ಕೆಲವು ನ್ಯಾಯಾಧೀಶರು ಕೋರಿದ್ದಾರೆ. ಇದನ್ನು ಅವರು ನಿರಾಕರಿಸಿದರೆ, ಸಂಸತ್ತಿನಲ್ಲಿ ದೋಷಾರೋಪಣೆ ಪ್ರಕ್ರಿಯೆಯನ್ನು ಪ್ರಾರಂಭಿಸಬಹುದು. ಇದನ್ನೂ ಓದಿ: ಜಾನ್ವಿ ಕಪೂರ್‌ಗೆ ವಿಶೇಷ ಉಡುಗೊರೆ ನೀಡಿದ ರಾಮ್ ಚರಣ್ ಪತ್ನಿ
ನಿಯಮ ಏನು ಹೇಳುತ್ತದೆ?
ಸಂವಿಧಾನದ ಪ್ರಕಾರ, ಯಾವುದೇ ಹೈಕೋರ್ಟ್ ಅಥವಾ ಸುಪ್ರೀಂಕೋರ್ಟ್ ನ್ಯಾಯಾಧೀಶರ ವಿರುದ್ಧದ ಭ್ರಷ್ಟಾಚಾರ, ದುರ್ನಡತೆ ಅಥವಾ ಅಕ್ರಮಗಳ ಆರೋಪಗಳನ್ನು ತನಿಖೆ ಮಾಡಲು ಸುಪ್ರೀಂಕೋರ್ಟ್ 1999 ರಲ್ಲಿ ಆಂತರಿಕ ಕಾರ್ಯವಿಧಾನವನ್ನು ರೂಪಿಸಿತು.
ಮಾರ್ಗಸೂಚಿಗಳ ಪ್ರಕಾರ, ಮುಖ್ಯ ನ್ಯಾಯಮೂರ್ತಿಗಳು ಮೊದಲು ಆರೋಪಿ ನ್ಯಾಯಾಧೀಶರಿಂದ ವಿವರಣೆಯನ್ನು ಕೇಳುತ್ತಾರೆ. ಪ್ರತಿಕ್ರಿಯೆ ತೃಪ್ತಿಕರವಾಗಿಲ್ಲದಿದ್ದರೆ ಅಥವಾ ಸಂಪೂರ್ಣ ತನಿಖೆ ಅಗತ್ಯವಿದ್ದರೆ, ಸಿಜೆಐ (Chief Justice of India) ಅವರು ಒಬ್ಬರು ಸುಪ್ರೀಂಕೋರ್ಟ್ ನ್ಯಾಯಾಧೀಶರು ಮತ್ತು ಇಬ್ಬರು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳನ್ನು ಒಳಗೊಂಡ ಆಂತರಿಕ ಸಮಿತಿಯನ್ನು ರಚಿಸಬೇಕಾಗುತ್ತದೆ. ಇದನ್ನೂ ಓದಿ: ವಿಧಾನಸಭೆಯಲ್ಲಿ ಕೋಲಾಹಲ- ಸ್ಪೀಕರ್ ಮೇಲೆ ಪೇಪರ್ ಎಸೆತ
ತನಿಖೆಯ ಫಲಿತಾಂಶದ ಆಧಾರದ ಮೇಲೆ, ಸಂಬಂಧಪಟ್ಟ ನ್ಯಾಯಾಧೀಶರನ್ನು ರಾಜೀನಾಮೆ ನೀಡುವಂತೆ ಕೇಳಬಹುದು ಅಥವಾ ದೋಷಾರೋಪಣೆಯನ್ನು ಎದುರಿಸಬಹುದು.