ಬೆಂಗಳೂರು: ಸೆಂಟ್ರಿಂಗ್ ಗೋಡೌನ್‌ಗೆ ಬೆಂಕಿ ಹೊತ್ತಿಕೊಂಡಿರುವ ಪರಿಣಾಮ ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿರುವ ಘಟನೆ ಬೆಂಗಳೂರಿನ ಉಳ್ಳಾಲ (Ullal) ಮುಖ್ಯ ರಸ್ತೆಯಲ್ಲಿ ನಡೆದಿದೆ.
ಶುಕ್ರವಾರ ರಾತ್ರಿ 11:30ರ ಸುಮಾರಿಗೆ ಈ ಅವಘಡ ಸಂಭವಿಸಿದ್ದು, ಕಿಡಿಗೇಡಿಗಳು ಕುಡಿದ ಮತ್ತಿನಲ್ಲಿ ಬೆಂಕಿಯಿಟ್ಟಿರಬಹುದು ಎಂದು ಶಂಕಿಸಲಾಗಿದೆ.ಇದನ್ನೂ ಓದಿ: ಲೋಕಾಯುಕ್ತರ ಮುಂದೆ ದಡೇಸುಗೂರು ನನ್ನ ಪತಿ ಎಂದ ಮಹಿಳಾಧಿಕಾರಿ – 2ನೇ ಮದುವೆಯಾದ್ರಾ ಮಾಜಿ ಶಾಸಕ?
ರಾತ್ರಿ 7:30ಕ್ಕೆ ಮಾಲೀಕ ಗೋಡೌನ್ ಬಂದ್ ಮಾಡಿ, ತೆರಳಿದ್ದರು. ಬಳಿಕ ಕಿಡಿಗೇಡಿಗಳು ಈ ಕೃತ್ಯ ಎಸಗಿರಬಹುದು ಎನ್ನಲಾಗಿದೆ. ಅವಘಡದಲ್ಲಿ ಲಕ್ಷಾಂತರ ಮೌಲ್ಯದ ಮರದ ಸೆಂಟ್ರಿಂಗ್ ವಸ್ತುಗಳು, ಒಂದು ಟಾಟಾ ಏಸ್ ವಾಹನ ಬೆಂಕಿಗಾಹುತಿಯಾಗಿದೆ.
ಮಾಹಿತಿ ತಿಳಿದು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು, 6ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳಿಂದ 5-6 ಗಂಟೆಗಳ ಕಾಲ ಬೆಂಕಿ ನಂದಿಸಲು ಹರಸಾಹಸಪಟ್ಟರು. ಸದ್ಯ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆಗೆ ಕಾರಣ ಯಾರು? ಬೆಂಕಿ ಹೊತ್ತಿಕೊಂಡಿದ್ದು ಹೇಗೆ? ಎನ್ನುವ ಕುರಿತು ತನಿಖೆ ನಡೆಯುತ್ತಿದೆ.ಇದನ್ನೂ ಓದಿ: ನನ್ನಿಂದ ನೀವೆಲ್ಲ ಸಿಕ್ಕಿಬಿದ್ರಿ.. ತಪ್ಪಾಯ್ತು: ಅರೆಸ್ಟ್ ಆದಾಗ ಪ್ರೋಟೊಕಾಲ್ ಸಿಬ್ಬಂದಿ ಮುಂದೆ ಕಣ್ಣೀರಿಟ್ಟಿದ್ದ ನಟಿ