ಯಾರೋ ಹುಡುಗರು ಮಾಡಿದ್ದಾರೆ, ಟ್ವೀಟ್‌ ವಿಥ್‌ ಡ್ರಾ ಮಾಡಿಸಿದ್ದೇನೆ: ಡಿಕೆ ಶಿವಕುಮಾರ್‌

Public TV
2 Min Read
dk shivakumar 1 1

ಬೆಂಗಳೂರು: ಯಾರೋ ಹುಡುಗರು ಮಾಡಿದ್ದಾರೆ. ನೋಡಿದ ತಕ್ಷಣ ನಾವು ಆ ಟ್ವೀಟ್‌ ಅನ್ನು ಹಿಂದಕ್ಕೆ ಪಡೆದಿದ್ದೇವೆ ಎಂದು ಎಂದು ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ಹೇಳಿದ್ದಾರೆ.

ಬಿಬಿಎಂಪಿ ಬೆಂಕಿ (BBMP Fire) ಆಕಸ್ಮಿಕ ಅಲ್ಲ, ಷಡ್ಯಂತ್ರ ಎಂಬ ಕಾಂಗ್ರೆಸ್ ಟ್ವೀಟ್ (Congress Tweet) ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾನು ಟ್ವೀಟ್ ನೋಡುತ್ತಿದ್ದೆ. ಸದ್ಯಕ್ಕೆ ಯಾರ ಮೇಲೂ ಆರೋಪ ಮಾಡುವುದಿಲ್ಲ. ಆ ಟ್ವೀಟ್‌ ಒಪ್ಪಲು ಸಾಧ್ಯವಿಲ್ಲ. ನನಗೆ ಗೊತ್ತಾದ ತಕ್ಷಣ ಟ್ವೀಟ್‌ ವಿಥ್‌ ಡ್ರಾ ಮಾಡಿಸಿದ್ದೇನೆ ಎಂದರು. ಇದನ್ನೂ ಓದಿ: ಹೆಬ್ಬೆಟ್‌ ಗಿರಾಕಿ ಮೋದಿ ಎಂದ ಕೆಪಿಸಿಸಿ ಐಟಿ ಸೆಲ್‌ ವಿರುದ್ಧ ಡಿಕೆಶಿ ಗರಂ. 

 

ಟ್ವೀಟ್‌ನಲ್ಲಿ ಏನಿತ್ತು?
ಶುಕ್ರವಾರ ಸಂಜೆ 5 ಗಂಟೆಯ ವೇಳೆಯ ವೇಳೆಗೆ ಬಿಬಿಎಂಪಿಯ ಗುಣನಿಯಂತ್ರಣ ವಿಭಾಗದ ಪ್ರಯೋಗಾಲಯದಲ್ಲಿ ಬೆಂಕಿ ಕಾಣಿಸಿತ್ತು. ಬೆಂಕಿ ಬಿದ್ದ ಬಳಿಕ ಕರ್ನಾಟಕ ಕಾಂಗ್ರೆಸ್‌ ತನ್ನ ಅಧಿಕೃತ ಖಾತೆಯಿಂದ ಬಿಬಿಎಂಪಿ ಕಚೇರಿಯ ಕಾಮಗಾರಿಗಳ ಗುಣಮಟ್ಟ ನಿಯಂತ್ರಣ ಪ್ರಯೋಗಾಲಯದಲ್ಲಿ ಕಾಮಗಾರಿಗಳ ದಾಖಲೆ ಇದ್ದಂತಹ ಕೊಠಡಿಗೆ ಬೆಂಕಿ ಬಿದ್ದಿರುವುದು ಆಕಸ್ಮಿಕವಲ್ಲ, ಷಡ್ಯಂತ್ರ. 40% ಕಮಿಷನ್ನಿನ ಕಳಪೆ ಕಾಮಗಾರಿಗಳ ಬಗ್ಗೆ ನ್ಯಾಯಾಂಗ ತನಿಖೆಗೆ ವಹಿಸಿದ ಬೆನ್ನಲ್ಲೇ ದಾಖಲೆಗಳಿದ್ದ ಕೊಠಡಿಗೆ ಬೆಂಕಿ ಹಚ್ಚಿರುವ ದುಷ್ಕರ್ಮಿಗಳನ್ನು, ಇದರ ಹಿಂದಿರುವ ಬಿಜೆಪಿ ಕರ್ನಾಟಕ ಭ್ರಷ್ಟರನ್ನು ಹೆಡೆಮುರಿ ಕಟ್ಟುವುದು ನಿಶ್ಚಿತ. ಬಿಜೆಪಿ ತಾನು ಮಾಡಿದ ಭ್ರಷ್ಟಾಚಾರದ ಸಾಕ್ಷ್ಯಗಳಿಗೆ ಬೆಂಕಿ ಇಟ್ಟು ಬಚಾವಾಗಿಬಿಡುವ ಹುನ್ನಾರ ನಡೆಸಿದೆ ಎಂದು ಟ್ವೀಟ್ ಮಾಡಿತ್ತು.

ಸಂಜೆ 5 ಗಂಟೆಯ ವೇಳೆಗೆ ಬೆಂಕಿ ಕಾಣಿಸಿಕೊಂಡಿದ್ದರೆ ಸಂಜೆ 5:44ಕ್ಕೆ ಕಾಂಗ್ರೆಸ್‌ ಟ್ವೀಟ್‌ ಮಾಡಿತ್ತು. ತನಿಖೆಯೇ ನಡೆಸದೇ ಇಷ್ಟು ಪಕ್ಕ ಬಿಜೆಪಿ ಬೆಂಕಿ ಹಾಕಿದೆ ಎಂದು ತೀರ್ಪು ನೀಡಿದ್ದು ಹೇಗೆ ಎಂಬ ಪ್ರಶ್ನೆಯನ್ನು ಕಮಲ ನಾಯಕರು ಎತ್ತಿದ್ದರು.
ಇದನ್ನೂ ಓದಿ: BBMP ಮುಖ್ಯ ಕಚೇರಿಯಲ್ಲಿ ಬೆಂಕಿ ಪ್ರಕರಣ – ಮೂವರು ಡಿ ಗ್ರೂಪ್ ನೌಕರರು ವಶಕ್ಕೆ

ಯತ್ನಾಳ್‌ ಕಿಡಿ
ಕಾಂಗ್ರೆಸ್ ಪಕ್ಷಕ್ಕೆ ಹೇಗೆ ಆರೋಪ ಮಾಡಿ ಓಡಿ ಹೋಗುವುದು ರೂಢಿಯೊ ಹಾಗೆ ಅವರ ಟ್ವಿಟ್ಟರ್ ಹ್ಯಾಂಡಲ್ ಸಹ! ಲಂಗು ಲಗಾಮು ಇಲ್ಲದ ಅಯೋಗ್ಯರು ಬಾಯಿಗೆ ಬಂದದ್ದು ಬರೆಯುವುದು ಅದರ ಸತ್ಯತೆಯ ಬಗ್ಗೆ ನಾವು ಬರೆದಾಗ ಟ್ವೀಟ್ ಡಿಲೀಟ್ ಮಾಡಿ ಓಡಿ ಹೋಗುವುದು. ಸುಳ್ಳು ಸುದ್ದಿ ಹರಡಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ ಮಹಾನುಭಾವ ಒಬ್ಬರಿದ್ದರಲ್ಲವೇ? ಎಲ್ಲಿ ಮಾಯವಾಗಿದ್ದಾರೆ ಎಂದು ಬಿಜೆಪಿ ಶಾಸಕ ಯತ್ನಾಳ್‌ ಪ್ರಶ್ನಿಸಿ ಕಿಡಿಕಾರಿದ್ದರು.

 

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article