ಬೆಂಗಳೂರು: ಇಲ್ಲಿನ ಕೆಂಗೇರಿ ಉಪನಗರದ ನಾಡಕಚೇರಿಗೆ (Nadakacheri) ಬೆಂಕಿ ಬಿದ್ದಿದ್ದು, ನೂರಾರು ದಾಖಲೆಗಳು ಸುಟ್ಟು ಕರಕಲಾಗಿವೆ. ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಸಂಪೂರ್ಣವಾಗಿ ಬೆಂಕಿ ನಂದಿಸಿದ್ದಾರೆ.
Advertisement
ಏನಿದು ಬೆಂಕಿ ದುರಂತ?
ಕೆಂಗೇರಿ ಉಪನಗರದ ನಾಡಕಚೇರಿ ಆವರಣದ ಪ್ರವೇಶ ದ್ವಾರದ ಬಳಿಯೇ ಬೆಂಕಿ ಕಾಣಿಸಿಕೊಂಡಿದೆ. ಬಳಿಕ ಇಡೀ ಕಚೇರಿಗೆ ಆವರಿಸಿದೆ. ಬೆಂಕಿ ತೀವ್ರವಾಗಿ ವ್ಯಾಪಿಸಿದ ಹಿನ್ನೆಲೆಯಲ್ಲಿ ನೂರಾರು ದಾಖಲೆಗಳು ಸುಟ್ಟು ಕರಕಲಾಗಿದೆ. ಇದನ್ನೂ ಓದಿ: ಅಧಿಕಾರಕ್ಕಾಗಿ ದೇವರ ಮೊರೆ ಹೋದ ದಳಪತಿ- ಆದಿಚುಂಚನಗಿರಿ ಕ್ಷೇತ್ರಕ್ಕೆ ಹೆಚ್‍ಡಿಕೆ ಭೇಟಿ
Advertisement
Advertisement
ಘಟನೆ ಬಳಿಕ ನಾಡಕಚೇರಿ ಸಿಬ್ಬಂದಿ ದೂರು ನೀಡಿದ್ದು, ಕೆಂಗೇರಿ ಪೊಲೀಸ್ ಠಾಣೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬಳಿಕ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಓಲ್ಡ್ ಮೈಸೂರೇ ಮೋದಿ ಟಾರ್ಗೆಟ್- ಒಂದೇ ದಿನ 4 ಜಿಲ್ಲೆಗಳಲ್ಲಿ ನಮೋ ಮಿಂಚಿನ ಸಂಚಾರ
Advertisement
ಕಂಪ್ಯೂಟರ್ ರೂಂ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಪ್ರಮುಖ ದಾಖಲೆಗಳನ್ನ ನಾಶಪಡಿಸುವ ಉದ್ದೇಶದಿಂದ ಕಿಡಿಗೇಡಿಗಳು ಬೆಂಕಿ ಹಾಕಿರುವ ಶಂಕೆ ವ್ಯಕ್ತವಾಗಿದೆ.