ಮಡಿಕೇರಿ: ಭತ್ತ ಕಟಾವು ಮಾಡಿ ಒಕ್ಕಣೆ ಮಾಡಲು ಸಂಗ್ರಹಿಸಿದ್ದ ಹುಲ್ಲಿಗೆ ಆಕಸ್ಮಿಕ ಬೆಂಕಿ ತಗುಲಿ ಸುಟ್ಟು ಭಸ್ಮವಾದ (Fire Accident) ಘಟನೆ ನಾಪೋಕ್ಲು ಸಮೀಪದ ಕೈಕಾಡು ಗ್ರಾಮದಲ್ಲಿ ನಡೆದಿದೆ.
ಶೆಡ್‍ನಲ್ಲಿದ್ದ ಕಾರು (Car) ಸಹ ಸಹ ಬೆಂಕಿಗೆ ಆಹುತಿಯಾಗಿದೆ. ವರ್ಷ ಪೂರ್ತಿ ಕಾದು ಬೆಳೆದ ಬೆಳೆ ಬೆಂಕಿ ಅಹುತಿಯಾದ ಪರಿಣಾಮ ಲಕ್ಷಾಂತರ ರೂ. ಹಣ ನಷ್ಟವಾಗಿದೆ. ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.
ನಿವೃತ್ತ ಸೈನಿಕ ನಾಣಯ್ಯ ಎಂಬವರ ಮನೆಯಲ್ಲಿ ಈ ಅವಘಡ ಸಂಭವಿಸಿದೆ. ಬೆಂಕಿ ನಂದಿಸುವಷ್ಟರಲ್ಲಿ ಭತ್ತದ ಹುಲ್ಲು ಹಾಗೂ ಕಾರು ಸುಟ್ಟು ಭಸ್ಮವಾಗಿದೆ. ಇದರಿಂದಾಗಿ ಬೆಳೆಗಾರ ಕಂಗಾಲಾಗಿದ್ದಾರೆ.