ಹುಬ್ಬಳ್ಳಿ: ತಾರಿಹಾಳದಲ್ಲಿರುವ ಸ್ಪಾರ್ಕ್ ಕ್ಯಾಂಡಲ್ ತಯಾರಿಕಾ ಕಂಪನಿಯಲ್ಲಿ ಭಾರೀ ದುರಂತ ಸಂಭವಿಸಿದೆ.
ಹುಟ್ಟುಹಬ್ಬಕ್ಕೆ ಬಳಸುವ ಸ್ಪಾರ್ಕ್ ಕ್ಯಾಂಡಲ್ ತಯಾರಿಕಾ ಘಟಕದಲ್ಲಿ ಭಾರೀ ಸ್ಫೋಟ ಉಂಟಾಗಿ 8 ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಚನ್ನವ್ವ (42), ಪ್ರೇಮಾ (20), ಮಾಳೇಶ (27), ನನ್ನಿಮಾ (35), ವಿಜಯಲಕ್ಷ್ಮಿ (34), ಮಲ್ಲಿಕರೆಹಾನ (18), ನಿರ್ಮಲಾ (29) ಹಾಗೂ ಗೌರವ (45) ಗಾಯಗೊಂಡವರು. ಇವರನ್ನೆಲ್ಲ ಕಿಮ್ಸ್‍ಗೆ ದಾಖಲಿಸಲಾಗಿದೆ.
ಕಾರ್ಯಾಚರಣೆಯ ವೇಳೆಯಲ್ಲೂ ಸ್ಪಾರ್ಕ್ ಲಿಂಕ್ ಘಟಕ ಮತ್ತೆ ಸ್ಫೋಟ ಸಂಭವಿಸಿದ್ದು, ಇದು ಜನರಲ್ಲಿ ಆತಂಕ ಹೆಚ್ಚಿಸಿದೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ದೌಡಾಯಿಸಿದ್ದಾರೆ. ಜನರನ್ನ ನಿಯಂತ್ರಿಸಲು ಪೊಲೀಸರ ಹರಸಾಹ ಪಟ್ಟರು. 15 ದಿನಗಳ ಹಿಂದಷ್ಟೇ ಕಾರ್ಖಾನೆ ಶುರುವಾಗಿತ್ತು. ಅಗ್ನಿಶಾಮಕ ಪಡೆಯಿಂದ ಅನುಮತಿ ಪಡೆದಿರಲಿಲ್ಲ ಎಂದು ಗೊತ್ತಾಗಿದೆ.
ಈ ಬಗ್ಗೆ ಪೊಲೀಸ್ ಕಮಿಷನರ್ ಲಾಭೂರಾಮ್ ಮಾಧ್ಯಮಗಳ ಜೊತೆ ಮಾತನಾಡಿ, 8 ಮಂದಿ ಗಾಯಾಳುಗಳನ್ನು ಕಿಮ್ಸ್ ದಾಖಲು ಮಾಡಲಾಗಿದೆ. ಅಗ್ನಿಶಾಮಕ ದಳ ಬೆಂಕಿ ಹತೋಟಿಗೆ ತಂದಿದೆ. ಫ್ಯಾಕ್ಟರಿ ಮಾಲೀಕರ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕಲಾಗುತ್ತಿದೆ ಎಂದರು. ಇದನ್ನೂ ಓದಿ: ಹಳ್ಳದಲ್ಲಿ ಕೊಚ್ಚಿ ಹೋಗಿದ್ದವ ಶವವಾಗಿ ಪತ್ತೆ – ತಕ್ಷಣವೇ ಐದು ಲಕ್ಷ ರೂ. ಪರಿಹಾರ ವಿತರಣೆ
ಅವಘಡ ಸ್ಥಳಕ್ಕೆ ಪಶ್ಚಿಮ ಕ್ಷೇತ್ರ ಶಾಸಕ ಅರವಿಂದ್ ಬೆಲ್ಲದ ಭೇಟಿ ನೀಡಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು. ಈ ಘಟನೆ ನಡೆಬಾರದಿತ್ತು ನಡೆದಿದೆ. ಈ ಫ್ಯಾಕ್ಟರಿ ಕೇವಲ 15 ದಿನದಿಷ್ಟೆ ಆರಂಭವಾಗಿದೆ. ಈ ಫ್ಯಾಕ್ಟರಿ ಅನಧಿಕೃತವಾಗಿದೆ ಯಾರು ತಿಳಿಯದೆ ಆರಂಭ ಮಾಡಲಾಗಿದೆ. ಘಟನೆಯಿಂದ ಫ್ಯಾಕ್ಟರಿ ಮಾಲೀಕ ತಬ್ಸಿಮ್ ಶೇಕ್ ಹೆದರಿ ತಲೆ ಮೆರಿಸಿಕೊಂಡಿದ್ದಾರೆ ಎಂದು ತಿಳಿಸಿದರು.