ಉಡುಪಿ: ನಗರದ ಕುಂಜಿಬೆಟ್ಟುವಿನಲ್ಲಿರುವ ಹೃತ್ವಿ ಎಲೆಕ್ಟ್ರಾನಿಕ್ಸ್ ನಲ್ಲಿ ಶಾರ್ಟ್ ಸಕ್ರ್ಯೂಟ್ ಆಗಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿದೆ.
ಕಳೆದ ರಾತ್ರಿ ಶ್ರೀ ಮಾ ಎನ್ಕ್ಲೇವ್ ನಲ್ಲಿರುವ ಕಟ್ಟಡದಲ್ಲಿರುವ ಹೃತ್ವಿ ಎಲೆಕ್ಟ್ರಾನಿಕ್ಸನ್ನು ರಾತ್ರಿ ಮುಚ್ಚಿ ಮಾಲೀಕರು ಮನೆ ಸೇರಿದ್ದರು. ಆದರೆ ರಾತ್ರಿ 10 ಗಂಟೆ ಸುಮಾರಿಗೆ ಶಾಪ್ ಒಳಗಿಂದ ಹೊಗೆ ಕಾಣಿಸಿಕೊಂಡಿದೆ. ಶಟರ್ ಬಿಸಿಯಾಗಿದೆ.
Advertisement
ಕೂಡಲೇ ಮಾಲೀಕರಿಗೆ ಕರೆ ಮಾಡಲಾಯ್ತು. ಶಟರ್ ತೆಗೆಯುವಷ್ಟರಲ್ಲಿ ಅಂಗಡಿಯೊಳಗೆ ಧಗ ಧಗ ಉರಿಯುವ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ನೀರು ಹಾಕಿ ಬೆಂಕಿ ನಂದಿಸುವ ಕೆಲಸ ಮಾಡಲಾಯ್ತು.
Advertisement
Advertisement
ಉಡುಪಿಯ ನವೀನ್ ಹೆಬ್ಬಾರ್ ಎಂಬವರಿಗೆ ಸೇರಿದ ಎಲೆಕ್ಟ್ರಾನಿಕ್ಸ್ ಅಂಗಡಿ ಇದಾಗಿದ್ದು, ಸ್ಥಳೀಯರು ತಕ್ಷಣ ಬೆಂಕಿ ಆರಿಸಲು ಯತ್ನಿಸಿದ್ದಾರೆ. ಅಗ್ನಿಶಾಮಕ ದಳ ಕೂಡಾ ಸ್ಥಳಕ್ಕೆ ಆಗಮಿಸಿ ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದಾರೆ. ಉಡುಪಿ ನಗರ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಮಾಹಿತಿ ಕಲೆ ಹಾಕಿದ್ದಾರೆ.
Advertisement
ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಸುಮಾರು ಎರಡು ಲಕ್ಷ ರೂಪಾಯಿ ನಷ್ಟವಾಗಿದೆ ಎನ್ನಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv