ಪೊಗರು ಸೆಟ್‍ನಲ್ಲಿ ಅಗ್ನಿ ಅನಾಹುತ – ಕೂದಲೆಳೆ ಅಂತರದಲ್ಲಿ ಧ್ರುವ ಸರ್ಜಾ ಪಾರು

Public TV
1 Min Read
dhruva sarja main

ಹೈದರಾಬಾದ್: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಗ್ರೇಟ್ ಎಸ್ಕೇಪ್ ಆಗಿದ್ದಾರೆ. ಪೊಗರು ಶೂಟಿಂಗ್ ಸೆಟ್‍ನಲ್ಲಿ ಅಗ್ನಿ ಅನಾಹುತವಾಗಿದ್ದು ಕೂದಲೆಳೆ ಅಂತರದಲ್ಲಿ ಧ್ರುವ ಸರ್ಜಾ ಪಾರಾಗಿದ್ದಾರೆ.

ಹೈದರಾಬಾದಿನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಕ್ಲೈಮ್ಯಾಕ್ಸ್ ಶೂಟಿಂಗ್ ನಡೆಯುತಿದ್ದು ಬೃಹತ್ ಸೆಟ್ ಹಾಕಲಾಗಿತ್ತು. ಫೈಟಿಂಗ್ ಶೂಟ್ ನಡೆಯುತ್ತಿದ್ದಾಗ ಅಗ್ನಿ ಅನಾಹುತ ಸಂಭವಿಸಿದ್ದು, ಸೆಟ್ ಬಹುತೇಕ ಸುಟ್ಟು ಕರಕಲಾಗಿದೆ. ಇದನ್ನೂ ಓದಿ:ಧ್ರುವ ಸರ್ಜಾ ಅಭಿನಯದ ಪೊಗರು ತಡವಾಗಲು ಅಸಲೀ ಕಾರಣ!

dhruva sarja 2 1

ರಗಡ್ ಸೀನ್‍ಗಾಗಿ ವಿದೇಶಿ ದೈತ್ಯ ಬಾಡಿಬಿಲ್ಡರ್ಸ್ ಕರೆತರಲಾಗಿತ್ತು. ನಂದಕಿಶೋರ್ ನಿರ್ಮಾಣದ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ದು, ಶಾನ್ವಿ ಶ್ರೀವಾತ್ಸವ್ ಅಭಿನಯಿಸುತ್ತಿದ್ದಾರೆ. ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿಯಲ್ಲೂ ಪೊಗರು ರಿಲೀಸ್ ಆಗಲಿದೆ.

ಚಿತ್ರದಲ್ಲಿ ಮಾಜಿ ಡಬ್ಲೂ ಡಬ್ಲೂ ಎಫ್ ಆಟಗಾರ ಮೋರ್ಗನ್ ಆಸ್ಟೆ ಸುಮಾರು 49 ದಿನಗಳ ಕಾಲ ಧೃವ ಸರ್ಜಾಗೆ ಟ್ರೈನಿಂಗ್ ಕೊಡಲಿದ್ದಾರೆ. ಆಟಗಾರನ ಜೊತೆಯಿದ್ದ ಖುಷಿಯನ್ನು ಧ್ರುವ ಸರ್ಜಾ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದರು.

 

ರೊಮ್ಯಾಂಟಿಕ್ ಆಕ್ಷನ್ ಚಿತ್ರ ಇದಾಗಿದ್ದು, ಧ್ರುವ ಸರ್ಜಾ ಅವರು 8ನೇ ತರಗತಿಯ ಹುಡುಗನಾಗಿ ಕಾಣಿಸಿಕೊಂಡಿರುವುದು ವಿಶೇಷ. ಈ ಪಾತ್ರಕ್ಕಾಗಿ ಕಠಿಣ ದೈಹಿಕ ಕಸರತ್ತು ನಡೆಸಿದ್ದ ಧ್ರುವಾ ಸರ್ಜಾ ಎರಡೇ ತಿಂಗಳಿನಲ್ಲಿ 30 ಕೆಜಿ ತೂಕ ಇಳಿಸಿಕೊಂಡಿದ್ದು ಭಾರೀ ಸುದ್ದಿಯಾಗಿತ್ತು. ಅರ್ಜುನ್ ಜನ್ಯ ಸಂಗೀತ, ಎಸ್ ವೈದ್ಯ ಅವರ ಛಾಯಾಗ್ರಹಣವಿದ್ದು, ಬಿ.ಕೆ. ಗಂಗಾಧರ್ ಬಂಡವಾಳ ಹೂಡಿದ್ದಾರೆ.

ಈ ಫೆಬ್ರವರಿಯಲ್ಲಿ ಧುವ ಸರ್ಜಾ, ಪೊಗರು ಚಿತ್ರದ ಎರಡನೇ ಹಂತದ ಶೂಟಿಂಗ್ ಆರಂಭವಾಗುತ್ತಿದೆ. ಅದ್ಧೂರಿ, ಬಹದ್ದೂರ್, ಭರ್ಜರಿ ಚಿತ್ರಕ್ಕೆ ಆಶೀರ್ವಾದ ಮಾಡಿದಂತೆ ಈ ಚಿತ್ರಕ್ಕೂ ಆಶೀರ್ವಾದ ಮಾಡಿ ಎಂದು ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದರು.

Share This Article