ಕಲಬುರಗಿ: ನಗರದ ಎಸ್ವಿಪಿ ವೃತ್ತದಲ್ಲಿರುವ ಏಷಿಯನ್ ಪ್ಲಾಜಾ ಕಟ್ಟಡದ ಎಂ.ಎಸ್.ಬಿ ಇಂಟರ್ನೆಟ್ ಸರ್ವೀಸ್ ಅಂಗಡಿಯಲ್ಲಿ ಅಗ್ನಿ ಅವಘಡ ಸಂಭವಿಸಿದೆ.
ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಪರಿಣಾಮ ಅಪಾರ ಪ್ರಮಾಣದ ಹೊಗೆ ಕಟ್ಟಡದ ತುಂಬಾ ಆವರಿಸಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಇನ್ನು ಕಟ್ಟಡದ ಮೂರನೇ ಅಂತಸ್ಥಿನಲ್ಲಿ ಸಿಲುಕಿದ್ದ ಓರ್ವ ಮಹಿಳೆಯನ್ನು ಅಗ್ನಿಶಾಮಕ ದಳ ಅಧಿಕಾರಿಗಳು ರಕ್ಷಿಸಿದ್ದಾರೆ.
ಅಗ್ನಿ ಅವಘಡದಲ್ಲಿ ಕಟ್ಟಡದಲ್ಲಿ ಗೂಡು ಮಾಡಿದ್ದ 50ಕ್ಕೂ ಹೆಚ್ಚು ಗುಬ್ಬಿ ಮರಿಗಳು ಸಾವನಪ್ಪಿವೆ. ಅಗ್ನಿಶಾಮಕ ದಳ ಅಧಿಕಾರಿಗಳ ಚುರುಕು ಕಾರ್ಯಾಚರಣೆಯಿಂದ ನಡೆಯಬಹುದಾದ ದೊಡ್ಡ ದುರಂತ ತಪ್ಪಿದ್ದೆ.
ಈ ಬಗ್ಗೆ ಹೇಳಿಕೆ ನೀಡಿದ ಅಗ್ನಿಶಾಮಕ ಅಧಿಕಾರಿ, ಶಾರ್ಟ್ ಸರ್ಕ್ಯೂಟ್ನಿಂದ ಈ ಅವಘಡ ಸಂಭವಿಸಿರಬಹುದು ಎಂದು ಹೇಳಿದ್ದಾರೆ.