ಆನೇಕಲ್: ಇಲ್ಲಿನ ಬೊಮ್ಮಸಂದ್ರದಲ್ಲಿ (Bommasandra) ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ಬಟ್ಟೆ ಕಾರ್ಖಾನೆ ಹೊತ್ತಿ ಉರಿದಿದೆ.ಇದನ್ನೂ ಓದಿ: ಹೊಸ ವರ್ಷಕ್ಕೆ ಶಾಕ್ – ಜ.5 ರಿಂದ ಬಸ್ ಪ್ರಯಾಣ ದರ ಏರಿಕೆ
ಅಗ್ನಿ ದುರಂತದ (Fire Accident) ಹಿನ್ನೆಲೆ ಇಡೀ ಕೈಗಾರಿಕಾ ಪ್ರದೇಶ ಹೊಗೆಯಿಂದ ಆವರಿಸಿದ್ದು, ಅಕ್ಕಪಕ್ಕದಲ್ಲಿಯೂ ಬೆಂಕಿ ಆವರಿಸುತ್ತಿದೆ. ಹೀಗಾಗಿ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಕಾರ್ಖಾನೆಯಲ್ಲಿ ಬೆಂಕಿ ಆವರಿಸಿರುವ ಪರಿಣಾಮ ಒಳಗೆ ಇರುವ ಯಂತ್ರಗಳು ಸ್ಫೋಟಗೊಳ್ಳುತ್ತಿವೆ. ಕಾರ್ಖಾನೆಯೊಳಗೆ ಯಾರಾದರೂ ಕಾರ್ಮಿಕರು ಇದ್ದಾರಾ ಎನ್ನುವ ಪ್ರಶ್ನೆ ಎಲ್ಲರಲ್ಲಿ ಮೂಡಿದೆ. ಜೊತೆಗೆ ಸುತ್ತಮುತ್ತಲಿರುವ ಕಂಪನಿಗಳಿಗೆ ಹಾಗೂ ಹೋಟೆಲ್‌ಗಳಿಗೆ ಆತಂಕ ಸೃಷ್ಟಿಯಾಗಿದೆ.ಇದನ್ನೂ ಓದಿ: ಸೈಬರ್ ಕ್ರೈಂ ಪೇದೆಗೆ ಹನಿಟ್ರ್ಯಾಪ್ – ಪತ್ನಿ ಆತ್ಮಹತ್ಯೆಗೆ ಯತ್ನ