ಬಾಗಲಕೋಟೆ: ತಾಲೂಕಿನ (Bagalkote) ಗದ್ದನಕೇರಿ ಕ್ರಾಸ್‍ನ ಮನೆಯೊಂದರಲ್ಲಿ ದೀಪಾವಳಿ (Deepavali) ಹಬ್ಬದ ಆಚರಣೆ ವೇಳೆ ದೀಪದಿಂದ ಸಂಭವಿಸಿದ್ದ ಅಗ್ನಿ ಅವಘಡದಲ್ಲಿ (Fire Accident) ಗಾಯಗೊಂಡಿದ್ದ ಯುವತಿ ಸಾವನ್ನಪ್ಪಿದ್ದಾಳೆ.
ಮೃತ ಯುವತಿಯನ್ನು ಸ್ನೇಹಾ ಮೇದಾರ (22) ಎಂದು ಗುರುತಿಸಲಾಗಿದೆ. ಗಾಯಗೊಂಡಿದ್ದ ಯುವತಿಯನ್ನು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲೇ ಆಕೆ ಸಾವನ್ನಪ್ಪಿದ್ದಾಳೆ. ಇದನ್ನೂ ಓದಿ: ಮನೆ ಮುಂದೆ ಹಚ್ಚಿದ ದೀಪದಿಂದ ಅಗ್ನಿ ಅವಘಡ – 3 ಬೈಕ್ ಭಸ್ಮ, 7 ಮಂದಿಗೆ ಗಾಯ
ಅಕ್ಟೋಬರ್ 19 ರಂದು ಅಗ್ನಿ ಅವಘಡ ಸಂಭವಿಸಿತ್ತು. ಬಾಗಿಲಿನ ಮುಂದೆ ಹಚ್ಚಿದ್ದ ದೀಪ ಮನೆ ಮುಂದೆ ಬಿದ್ದ ಆಯಿಲ್‍ಗೆ ತಗುಲಿ. ಮನೆಗೆ ಬೆಂಕಿ ತಗುಲಿತ್ತು. ಈ ವೇಳೆ ಸಿಲಿಂಡರ್ ಸ್ಫೋಟಗೊಂಡಿದ್ದರಿಂದ ಬೆಂಕಿ ತೀವ್ರತೆ ಇನ್ನಷ್ಟು ಹೆಚ್ಚಾಗಿತ್ತು.
ಘಟನೆಯಲ್ಲಿ 8 ಜನ ಗಾಯಗೊಂಡಿದ್ದರು. ಅಲ್ಲದೇ ಮನೆ ಮುಂದೆ ನಿಲ್ಲಿಸಿದ್ದ 8 ಬೈಕ್ ಸುಟ್ಟು ಕರಕಲಾಗಿದ್ದವು. ಕಲಾದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು. ಇದನ್ನೂ ಓದಿ:

