ರಾಯಚೂರು: ಜಿಲ್ಲೆಯ ಶಕ್ತಿನಗರದಲ್ಲಿರುವ ಶಾಖೋತ್ಪನ್ನ ವಿದ್ಯುತ್ ಕೇಂದ್ರ (Thermal Power Station) ಆರ್‌ಟಿಪಿಎಸ್ (RTPS) ಮತ್ತೊಮ್ಮೆ ಅವಘಡ ನಡೆದಿದೆ. ಕಲ್ಲಿದ್ದಲು (Coal) ಸರಬರಾಜು ಮಾಡುವ ಕನ್ವೇಯರ್ ಬೆಲ್ಟ್‌ಗೆ ಬೆಂಕಿ ಹೊತ್ತಿ ಲಕ್ಷಾಂತರ ರೂ. ಹಾನಿಯಾಗಿದೆ.
ಘಟನೆಯಲ್ಲಿ 25ಕ್ಕೂ ಹೆಚ್ಚು ಕ್ಯಾರಿಂಗ್ ರೋಲರ್‌ಗಳು ಬೆಂಕಿಗಾಹುತಿಯಾಗಿವೆ. ಸಿಬ್ಬಂದಿ ನಿರ್ಲಕ್ಷ್ಯದಿಂದ ಸುಮಾರು 70 ಲಕ್ಷ ರೂ. ಹಾನಿ ಸಂಭವಿಸಿದೆ. 5 ಮತ್ತು 8ನೇ ಘಟಕಕ್ಕೆ ಕಲ್ಲಿದ್ದಲು ಸರಬರಾಜು ಮಾಡುವ ಬೆಲ್ಟ್ ಬೆಂಕಿಗಾಹುತಿಯಾಗಿದೆ. ಬೆಲ್ಟ್ ಸುಟ್ಟ ಹಿನ್ನೆಲೆ ಕಲ್ಲಿದ್ದಲು ಸರಬರಾಜು ಬಂದ್ ಆಗಿದೆ. ಆಂಧ್ರಪ್ರದೇಶ ಮೂಲದ ಖಾಸಗಿ ಸಂಸ್ಥೆ ನಿರ್ವಹಣೆ ಪಡೆದಿದ್ದು, ನಿರ್ವಹಣೆ ವೈಫಲ್ಯದಿಂದ ಅವಘಡ ನಡೆದಿದೆ. ಇದನ್ನೂ ಓದಿ: ಬಿಜೆಪಿಯವರು ನನ್ನನ್ನು ಕ್ರಿಮಿನಲ್ ಮಾಡಿದ್ದಾರೆ: ಡಿಕೆಶಿ
ಕೆಪಿಸಿಎಲ್ (KPCL) ಅಗ್ನಿಶಾಮಕದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಗಸ್ಟ್ ತಿಂಗಳಲ್ಲಿ ಹಾರೋ ಬೂದಿ ಸಾಗಿಸುವ ಬಂಕರ್‌ಗಳು ಕಳಚಿ ಬಿದ್ದಿದ್ದವು. ಘಟನೆಯಿಂದ ಮೂರು ತಿಂಗಳಾದರೂ ಒಂದನೇ ಘಟಕ ಇನ್ನೂ ಕಾರ್ಯಾರಂಭ ಮಾಡಿಲ್ಲ. ಈಗ ಮತ್ತೊಮ್ಮೆ ಅವಘಡ ನಡೆದಿದ್ದು ವಿದ್ಯುತ್ ಕೇಂದ್ರದಲ್ಲಿನ ನಿರ್ವಹಣೆ ವೈಫಲ್ಯ ಎದ್ದು ಕಾಣುತ್ತಿದೆ. ಇದನ್ನೂ ಓದಿ: ಬಿಜೆಪಿ ಸರ್ಕಾರದ ಮೇಲೆ ಹೇಸಿಗೆ ಬರುತ್ತಿದೆ : ಶ್ರೀರಾಮಸೇನೆ