ಕಲಬುರಗಿ: ಸೋಮವಾರ ರಾತ್ರಿ ನಗರದ ಸರ್ದಾರ್ ವೃತ್ತದ ಬಳಿಯ ಸ್ಟೇಟ್ ಬ್ಯಾಂಕ್ ಆಫ್ ಹೈದ್ರಾಬಾದ್ ಶಾಖೆಯ ಬ್ಯಾಂಕ್‍ನಲ್ಲಿ ಅಗ್ನಿ ಅವಘಡ ಸಂಭವಿಸಿದೆ.
ಬ್ಯಾಂಕ್ ಪಕ್ಕದಲ್ಲಿದ್ದ ಕಸದ ಗುಂಡಿಗೆ ಹಚ್ಚಿದ ಬೆಂಕಿ ನಿಧಾನವಾಗಿ ಬ್ಯಾಂಕ್ ಕಟ್ಟಡಕ್ಕೆ ಆವರಿಸಿಕೊಂಡಿದ್ದರಿಂದ ಈ ಅವಘಢ ಸಂಭವಿಸಿದೆ. ಬೆಂಕಿಯ ತೀವ್ರತೆಗೆ ಬ್ಯಾಂಕ್‍ನಲ್ಲಿನ ಪೀಠೋಪಕರಣಗಳು ಸುಟ್ಟು ಭಸ್ಮವಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದು, ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬ್ಯಾಂಕ್‍ನಲ್ಲಿ ಹೆಚ್ಚಿನ ಪ್ರಮಾಣದ ಹಾನಿಯಾಗಿಲ್ಲ. ಹಣದ ಲಾಕರ್ ಸೇಫಾಗಿದೆ. ಚಿನ್ನಾಭರಣದ ಲಾಕರ್‍ಗೂ ಬೆಂಕಿ ಆವರಿಸಿಲ್ಲ. ಕೇವಲ ಬ್ಯಾಂಕ್‍ನ ಫರ್ನಿಚರ್ ಹಾಗೂ ಸೀಲಿಂಗ್ ವಸ್ತುಗಳಿಗೆ ಬೆಂಕಿ ತಗುಲಿದೆ ಎಂದು ಬ್ಯಾಂಕ್ ಮ್ಯಾನೇಜರ್ ರವಿ ಗೌಡ ತಿಳಿಸಿದ್ದಾರೆ.
ಸ್ಟೇಷನ್ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅವಘಡ ಸಂಭವಿಸಿದೆ.