Districts
ಮಾರ್ಕೆಟ್ ನಲ್ಲಿ ಆಕಸ್ಮಿಕ ಬೆಂಕಿ- 2 ತರಕಾರಿ ಅಂಗಡಿಗಳು ಸುಟ್ಟು ಭಸ್ಮ

ಮೈಸೂರು: ಅಗ್ರಹಾರ ವೃತ್ತದಲ್ಲಿನ ಚಿಕ್ಕ ಮಾರ್ಕೆಟ್ ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಪರಿಣಾಮ ಮಾರುಕಟ್ಟೆಯಲ್ಲಿನ ಎರಡು ತರಕಾರಿ ಅಂಗಡಿಗಳು ಸುಟ್ಟು ಭಸ್ಮವಾಗಿವೆ.
ಪ್ರಮೋದ್ ಎಂಬವರಿಗೆ ಸೇರಿದ್ದ ಈ ಎರಡು ತರಕಾರಿ ಅಂಗಡಿಯಲ್ಲಿ ಒಂದು ಲಕ್ಷ ರೂ. ಮೌಲ್ಯದ ತರಕಾರಿ ಹಾಗೂ ತರಕಾರಿ ತೂಗುವ ಎಲೆಕ್ಟ್ರಾನಿಕ್ ಯಂತ್ರ ಇದ್ದುವು. ಇದೆಲ್ಲಾ ಸುಟ್ಟು ಕರಕಲಾಗಿದೆ.
ವಿಷಯ ತಿಳಿದು ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ಕೆನ್ನಾಲಿಗೆ ಪಕ್ಕದ ಅಂಗಡಿಗಳಿಗೆ ಹರಡದಂತೆ ಯಶಸ್ವಿಯಾಗಿ ತಡೆದಿದ್ದಾರೆ. ಇದರಿಂದ ನಷ್ಟದ ಪ್ರಮಾಣ ಹೆಚ್ಚಾಗುವುದು ತಪ್ಪಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
